ಗುರುವಾರ , ಏಪ್ರಿಲ್ 22, 2021
24 °C

ಕರಾವಳಿ ಕಾವಲು ಪಡೆ ಸಿಬ್ಬಂದಿ ಕಾರ್ಯಾಚರಣೆ: ಮೀನುಗಾರರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮೀನುಗಾರಿಕೆ ನಡೆಸಿ ಪುನಃ ಬರುತ್ತಿದ್ದ ದೋಣಿಯೊಂದರ ತಳಭಾಗ ಒಡೆದು ಇಲ್ಲಿನ ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಭಾನುವಾರ ರಾತ್ರಿ ಭಾಗಶಃ ಮುಳುಗಿತ್ತು. ಕರಾವಳಿ ಕಾವಲು ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೋಣಿಯನ್ನು  ಕಾರವಾರದ ಬೈತಖೋಲ್‌ ಮೀನುಗಾರಿಕಾ ಬಂದರಿಗೆ ತಂದಿದ್ದಾರೆ.

ದೋಣಿಯಲ್ಲಿದ್ದ ಎಲ್ಲ ಎಂಟು ಮೀನುಗಾರರನ್ನು ಇತರ ದೋಣಿಗಳ ಮೀನುಗಾರರನ್ನು ರಕ್ಷಿಸಿದ್ದಾರೆ.

ಉಡುಪಿಯ ನೋಂದಣಿ ಸಂಖ್ಯೆ ಹೊಂದಿರುವ 'ಶ್ರೀ ಸೌಪರ್ಣಿಕಾ' ಹೆಸರಿನ ದೋಣಿ ಇದಾಗಿದ್ದು, ತಳ ಒಡೆದ ಕಾರಣ ಅದರ ಎಂಜಿನ್ ವರೆಗೂ ನೀರು ನುಗ್ಗಿತ್ತು. ಈ ಸಂಬಂಧ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮೀನುಗಾರರು ಮಾಹಿತಿ ರವಾನಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು