ಮಂಗಳವಾರ, ಅಕ್ಟೋಬರ್ 15, 2019
29 °C

ವೆಂಕಟರಮಣನಿಗೆ ರಾಜಭೋಗ ಅರ್ಪಣೆ

Published:
Updated:
Prajavani

ಶಿರಸಿ: ಶರನ್ನವರಾತ್ರಿ ಅಂಗವಾಗಿ ತಾಲ್ಲೂಕಿನ ಮಂಜುಗುಣಿಯ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಗುರುವಾರ ದೇವರಿಗೆ ರಾಜಭೋಗಾರ್ಪಣೆ ಕಾರ್ಯಕ್ರಮ ಸಂಪನ್ನಗೊಂಡಿತು.

ನಿತ್ಯ ಪೂಜೆಗೆ ಹಾಗೂ ವಿಶೇಷ ಪೂಜಾ ಕೈಂಕರ್ಯಕ್ಕೆ ಅಗತ್ಯವಿರುವ ಬಂಗಾರದ ಪಾದುಕೆ, ಲಕ್ಷ್ಮೀಹಾರ, ಬೆಳ್ಳಿಯ ತಟ್ಟೆ ಪಾತ್ರೆಗಳು, ಅನಂತಶಯನ, ಛತ್ರ ಚಾಮರಾದಿಗಳು, ಗರುಡ ಕವಚವನ್ನು ಭಕ್ತರು ಸೇವಾರೂಪದಲ್ಲಿ ಸಮರ್ಪಿಸಿದರು. ದೇವರ ಸುಖಶಯನವನ್ನು ಕಲ್ಪಿಸುವ ತೊಟ್ಟಿಲು, ತಂಗಾಳಿಯನ್ನು ಕಲ್ಪಿಸುವ ಚಾಮರ, ಛತ್ರ, ದರ್ಪಣ, ಬೀಸಣಿಕೆ ಅರ್ಪಿಸಲಾಯಿತು. ಮಂಜುಗುಣಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ನೇತೃತ್ವದಲ್ಲಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರಹೋಮ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಪೂರ್ಣಾಹುತಿ ನಡೆದವು.

ಪ್ರತಿ ವರ್ಷದಂತೆ ವೆಂಕಟೇಶ್ವರನ ಸನ್ನಿಧಿಯಲ್ಲಿ ಅಖಂಡ ಭಜನಾ ಕಾರ್ಯಕ್ರಮ ಸೆ.29ರಿಂದ ಅ.4 ತನಕ ಐದು ದಿನಗಳ ಕಾಲ ನಡೆಯಿತು.

Post Comments (+)