ಗುರುವಾರ , ಅಕ್ಟೋಬರ್ 6, 2022
23 °C

ಕಾರವಾರ: ನೌಕಾನೆಲೆ ಪ್ರವೇಶಿಸಿದ ಅಪರಿಚಿತರಿಗೆ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ನಿಷೇಧಿತ ಪ್ರದೇಶಕ್ಕೆ ಸೆ.1ರಂದು ಸಂಜೆ 7.40ರ ಸುಮಾರಿಗೆ ನಾಲ್ವರು ಅಪರಿಚಿತರು ಪ್ರವೇಶಿಸಿದ್ದಾರೆ. ಅವರ ಚಲನವಲನಗಳು ಭದ್ರತಾ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ನೌಕಾನೆಲೆ ವ್ಯಾಪ್ತಿಯಲ್ಲಿರುವ ಕೊಡಾರ ಕಡಲತೀರದ ಬಳಿ ಸಮುದ್ರ ದಡದಲ್ಲಿ ನಾಲ್ವರು ಇದ್ದ ದೃಶ್ಯಗಳು ದಾಖಲಾಗಿವೆ. ಅದನ್ನು ಆಧರಿಸಿ, ನೌಕಾನೆಲೆಯ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಡಿದಾಗ ಅಲ್ಲಿ ಯಾರೂ ಕಂಡುಬಂದಿಲ್ಲ. 

ಈ ಬಗ್ಗೆ ನೌಕಾನೆಲೆಯ ಲೆಫ್ಟಿನೆಂಟ್ ಆಫೀಸರ್ ದಿ ಕಮಾಂಡಿಂಗ್ ಆಫೀಸರ್ ಆಶುತೋಷ್ ತಿವಾರಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ. ಕೋಸ್ಟಲ್ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಸಹಕಾರದೊಂದಿಗೆ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಅವರು ಕೋರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು