ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬಹುವಿಧದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶು ಆರೋಗ್ಯದಲ್ಲಿ ಚೇತರಿಕೆ

Last Updated 12 ಆಗಸ್ಟ್ 2020, 16:45 IST
ಅಕ್ಷರ ಗಾತ್ರ

ಶಿರಸಿ: ಜನಿಸುವಾಗಲೇ ಕಡಿಮೆ ತೂಕ, ಹೃದಯ ಸಂಬಂಧಿ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿರುವ ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಮಗು ಗುಣಮುಖವಾಗುವಲ್ಲಿ ವಿಶೇಷ ಪರಿಶ್ರಮವಹಿಸಿದ್ದಾರೆ.

12 ದಿನಗಳ ಹಿಂದೆ ಪಂಡಿತ ಆಸ್ಪತ್ರೆಯಲ್ಲಿ ಮುಂಡಗೋಡ ತಾಲ್ಲೂಕು ಕಾವಲಕೊಪ್ಪದ 39 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆಯಾಗಿತ್ತು. ಮಗು ಹುಟ್ಟುವಾಗ 1.5 ಕೆ.ಜಿ ಇತ್ತು. ಉಸಿರಾಟ, ಹೃದಯ ಸಮಸ್ಯೆ ಜತೆಗೆ ಮಗುವಿಗೆ ನ್ಯುಮೋನಿಯಾ ಕೂಡ ಆಗಿತ್ತು. ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ್ದರು. ಈಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮಕ್ಕಳ ತಜ್ಞ ಡಾ.ಆರ್ಶಿತ್ ಭಟ್ಟ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ, ಸಿಬ್ಬಂದಿ ಮಗುವಿನ ಆರೈಕೆಗೆ ವಿಶೇಷ ನಿಗಾವಹಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅಂದಾಜು ₹ 3ಲಕ್ಷದಷ್ಟು ವೆಚ್ಚವಾಗುತ್ತಿದ್ದ ಚಿಕಿತ್ಸೆಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತವಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT