ಶನಿವಾರ, ಆಗಸ್ಟ್ 20, 2022
21 °C
ವಿದ್ಯಾರ್ಥಿಗಳಿಗೆ ಸಿಗದ ಮಾಹಿತಿ

ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ ಸಮಸ್ಯೆ:ಕೈಗೆಟಕುತ್ತಿಲ್ಲ ಆನ್‌ಲೈನ್‌ ಶಿಕ್ಷಣ

ಸಬೀನಾ ಎ. Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವು ಸೆ.1ರಿಂದ ಆನ್‌ಲೈನ್ ಮೂಲಕ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಆದರೆ, ಇಂಟರ್‌ನೆಟ್‌ ಲಭ್ಯವಿಲ್ಲದೇ ಜಿಲ್ಲೆಯ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳಿಗೆ ತರಗತಿಗಳ ಬಗ್ಗೆ ಮಾಹಿತಿಯೇ ಇಲ್ಲ.

ಮಳೆಯಿಂದಾಗಿ ವಿದ್ಯುತ್‌ ಕಡಿತ, ರಸ್ತೆ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಮರೀಚಿಕೆಯಾಗಿದೆ. ಕರೆ ಮಾಡಲೂ ನೆಟ್‌ವರ್ಕ್‌ ಸಿಗದ ಸ್ಥಿತಿಯಲ್ಲಿ ಇಂಟರ್‌ನೆಟ್‌ ಸೌಲಭ್ಯ ಗಗನಕುಸುಮವಾಗಿದೆ.

ಆನ್‌ಲೈನ್‌ ಶಿಕ್ಷಣ ಸವಾಲು: ‘ನಮ್ಮಲ್ಲಿ ಶೇ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ ಸಂಪರ್ಕವೇ ಇಲ್ಲ. ಆನ್‌
ಲೈನ್‌ನಲ್ಲಿ ಪ್ರಾಯೋಗಿಕ ತರಗತಿ ಮಾಡುವುದು ದೊಡ್ಡ ಸವಾಲು. ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಲಾಗಿದೆ. ಅದರಲ್ಲಿ ಮಾಹಿತಿ ಹಂಚಿಕೊಂಡರೂ ಇಂಟರ್‌ನೆಟ್‌ ಸಂಪರ್ಕ ಇಲ್ಲದೇ ಅದು ಎಲ್ಲರನ್ನೂ ಸಕಾಲದಲ್ಲಿ ತಲುಪುವುದಿಲ್ಲ’ ಎಂಬುದು ಯಲ್ಲಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ದಾಕ್ಷಾಯಣಿ ಹೆಗಡೆ ಅಭಿಪ್ರಾಯ.

‘ಆನ್‌ಲೈನ್‌ ತರಗತಿ ಅಂತಾರೆ. ಆದರೆ ಇಲ್ಲಿ ರಾಶಿ ಸಮಸ್ಯೆಗಳಿವೆ. ನೆಟ್‌ವರ್ಕ್‌ಗಾಗಿಯೇ ಮಕ್ಕಳನ್ನು ಸಂಬಂಧಿಕರ ಮನೆ
ಯಲ್ಲಿರಿಸಿ ಓದಿಸುವಂತಾಗಿದೆ. ನಾವೂ ಅಸಹಾಯಕರಾಗಿದ್ದೇವೆ’ ಎಂದು ಪೋಷಕ ರಾಮಚಂದ್ರ ಭಟ್‌ ತಿಳಿಸಿದರು.

ನೀಗದ ಉಪನ್ಯಾಸಕರ ಕೊರತೆ: ‘ಶೈಕ್ಷಣಿಕ ವರ್ಷ ಆರಂಭವಾದ ಕೆಲವೇ ದಿನಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕವಾ
ಗುತ್ತಿತ್ತು. ಈ ಬಾರಿ ಇನ್ನೂ ನೇಮಕವಾಗಿಲ್ಲ. ಮುಖ್ಯ ವಿಷಯಗಳಿಗೆ ಉಪನ್ಯಾಸಕರೇ ಇಲ್ಲ. ಕೆಲವೇ ಉಪನ್ಯಾಸಕರು ನೂರಾರು ಮಕ್ಕಳ ಜವಾಬ್ದಾರಿ ಹೊರುವಂತಾಗಿದೆ. ಈ ಒತ್ತಡದಿಂದಲೂ ಪರಿಣಾಮಕಾರಿ ಶಿಕ್ಷಣ ನೀಡುವುದು ಕಷ್ಟಸಾಧ್ಯ’ ಎಂದು ಅಳಲುತೋಡಿ
ಕೊಳ್ಳುತ್ತಾರೆ ಪ್ರಾಚಾರ್ಯೆ ದಾಕ್ಷಾಯಣಿ ಅವರು.

‘ಜಿಲ್ಲೆಯ ಬಹುತೇಕ ಜನ ಬಿಎಸ್‌ಎನ್‌ಎಲ್‌ ಸಂಪರ್ಕಜಾಲ ಅವಲಂಬಿಸಿದ್ದಾರೆ. ವಿದ್ಯುತ್ ಇದ್ದಾಗ ಮಾತ್ರ ಅಂತರ್ಜಾಲ ಲಭ್ಯ. ಮುಂದಿನ ಶಿಕ್ಷಣ ಹೇಗೆ’ ಎಂಬುದು ಹಲವು ಪೋಷಕರ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು