ಸೋಮವಾರ, ಆಗಸ್ಟ್ 19, 2019
23 °C

ರೈಲು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಶುದ್ಧ ನೀರು

Published:
Updated:
Prajavani

ಕಾರವಾರ: ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರು ಒದಗಿಸುವ ‘ಜನಜಲ್ ವಾಟರ್ ವೆಂಡಿಂಗ್ ಮೆಶಿನ್‌’ ಅನ್ನು ಭಟ್ಕಳದಲ್ಲಿ ಈಚೆಗೆ ಉದ್ಘಾಟಿಸಲಾಯಿತು.

ಈ ಯಂತ್ರಕ್ಕೆ ನಾಣ್ಯ ಹಾಕಿ ಅಥವಾ ವಿವಿಧ ಆ್ಯಪ್‌ಗಳ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಕೂಡ ಹಣ ಪಾವತಿಸಬಹುದು. ₹ 1ರಲ್ಲಿ 300 ಮಿ.ಲೀ., ₹ 3ಕ್ಕೆ 500 ಮಿ.ಲೀ., ₹ 5ಕ್ಕೆ ಒಂದು ಲೀಟರ್, ₹ 8ಕ್ಕೆ ಎರಡು ಲೀಟರ್ ಮತ್ತು ₹ 20ಕ್ಕೆ ಐದು ಲೀಟರ್ ನೀರನ್ನು ತಮ್ಮ ಬಾಟಲಿ, ಕ್ಯಾನ್‌ಗಳಲ್ಲಿ ತುಂಬಿಕೊಳ್ಳಬಹುದು. ಲೋಟದ ಮೂಲಕ ನೀರು
ಕುಡಿಯುವವರು ₹ 2 ಪಾವತಿಸಬೇಕಿದೆ.

‘ಈ ಯಂತ್ರದಲ್ಲಿ ನೀರು ಶುದ್ಧವಾಗಿರಲು ಯು.ವಿ ಮತ್ತು ಯು.ಎಫ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಯಂತ್ರದಿಂದ ದಿನದ 24 ಗಂಟೆಯೂ ಪ್ರಯಾಣಿಕರು ನೀರು ಪಡೆಯಬಹುದು’ ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕೊಂಕಣ ರೈಲ್ವೆಯು ಕರ್ನಾಟಕ ವ್ಯಾಪ್ತಿಯ ನಿಲ್ದಾಣಗಳಲ್ಲಿ ಒಟ್ಟು 12 ಘಟಕಗಳನ್ನು ಅಳವಡಿಸುತ್ತಿದೆ. ಈಗಾಗಲೇ ನಾಲ್ಕು ನಿಲ್ದಾಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Post Comments (+)