ಶುಕ್ರವಾರ, ಆಗಸ್ಟ್ 23, 2019
22 °C

ಕಾಳಿ ನದಿಯಲ್ಲಿ ಮತ್ತಷ್ಟು ಏರಿದ ನೀರಿನ ಮಟ್ಟ: ನದಿ ಪಾತ್ರ ತೊರೆಯಲು ಸೂಚನೆ

Published:
Updated:

ಕಾರವಾರ: ಕಾಳಿ ನದಿ ತೀರದಲ್ಲಿ ವಾಸಿಸುವ ಜನರು ತಮ್ಮ ಜಾನುವಾರು ಜೊತೆ ಈ ಕೂಡಲೇ ಸಮೀಪದ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಕಾಳಿ ನದಿಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು ಅಪಾಯದ ಸಾಧ್ಯತೆ ಇದೆ. ನದಿ ಪಾತ್ರದ ಜನರು ತಕ್ಷಣ ಸಮೀಪದ ಪೊಲೀಸರು ಅಥವಾ ಪರಿಹಾರ ಕ್ರಮ ಉಸ್ತುವಾರಿ ಕೈಗೊಂಡಿರುವ ಸ್ಥಳೀಯ ಅಧಿಕಾರಿಗಳು ಅಥವಾ ನಗರಸಭೆ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ. 

ಸಂತ್ರಸ್ಥರು ತಕ್ಷಣ ತಮ್ಮ ಸ್ಥಳಬಿಟ್ಟು ಸುರಕ್ಷಿತವಾಗಿ ಗಂಜಿಕೇಂದ್ರಗಳನ್ನು ಆಶ್ರಯಿಸಬೇಕೆಂದು ಅವರು ತಿಳಿಸಿದ್ದಾರೆ.

Post Comments (+)