ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ಶಿರ್ಲೆ ಜಲಪಾತದ ಬಳಿ ನಾಪತ್ತೆಯಾಗಿದ್ದವರು ಪತ್ತೆ

Last Updated 23 ಜುಲೈ 2021, 10:18 IST
ಅಕ್ಷರ ಗಾತ್ರ

ಯಲ್ಲಾಪುರ: ಶಿರ್ಲೆ ಜಲಪಾತಕ್ಕೆಂದು ಹೋಗಿ ಕಾಡಿನಲ್ಲಿ ನಾಪತ್ತೆಯಾದವರು ಸುರಕ್ಷಿತವಾಗಿ ಪತ್ತೆಯಾಗಿದ್ದು, ಅವರನ್ನು ಯಲ್ಲಾಪುರಕ್ಕೆ ಕರೆದುಕೊಂಡು ಬರಲಾಗಿದೆ.

ಹುಬ್ಬಳ್ಳಿಯ ನವನಗರದ ಮೆಹಬೂಬ್, ಇಮ್ತಿಯಾಜ್, ಅಹಮದ್, ಶಾನವಾಜ್, ಅಲ್ತಾಫ್ ಹಾಗೂ ಆಸಿಫ್ ಮೂರು ಡಿಯೋ ಸ್ಕೂಟರ್‌ನಲ್ಲಿ ಗುರುವಾರ ಜಲಪಾತಕ್ಕೆ ತೆರಳಿದ್ದರು. ಹಳ್ಳ ದಾಟಲು ಇದ್ದ ಕಾಲುಸಂಕದಲ್ಲಿ ಅವರು ಸಾಗಿದ್ದರು. ಆದರೆ, ನೀರಿನ ಪ್ರವಾಹ ಹೆಚ್ಚಾಗಿ, ಕಾಲುಸಂಕ ಕೊಚ್ಚಿಕೊಂಡು ಹೋಯಿತು. ಇದರಿಂದ ಪುನಃ ಬರಲಾಗದೇ ಜಲಪಾತವಿರುವ ಗುಡ್ಡದ ಮತ್ತೊಂದು ಭಾಗದಲ್ಲಿ ರಾತ್ರಿ ಕಳೆದರು. ಶುಕ್ರವಾರ ಬೆಳಿಗ್ಗೆ ದಾರಿ ಹುಡುಕುತ್ತ ರಾಘವೇಂದ್ರ ಭಟ್ಟ ಎಂಬವರ ತೋಟಕ್ಕೆ ತಲುಪಿದರು. ಅವರು ಬೆಳಿಗ್ಗೆ ತೋಟಕ್ಕೆ ತೆರಳಿದ್ದಾಗ ತೋಟದ ಮೂಲೆಯಲ್ಲಿ ಆರು ಮಂದಿ ನಡುಗುತ್ತ ನಿಂತಿರುವುದು ಕಂಡುಬಂತು.

ನಾಪತ್ತೆಯಾಗಿದ್ದವರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹುಬ್ಬಳ್ಳಿಯಿಂದ ಬಂದ ಅವರ ಸಂಬಂಧಿಕರು ತೀವ್ರವಾಗಿ ಹುಡುಕಾಟ ನಡೆಸಿದ್ದರು. ಪತ್ತೆಯಾದ ಅವರನ್ನು ಪೊಲೀಸ್ ಸಿಬ್ಬಂದಿಗೆ ಒಪ್ಪಿಸಲಾಯಿತು.

ಮೆಹಬೂಬ್, ಇಮ್ತಿಯಾಜ್, ಅಹಮದ್, ಶಾನವಾಜ್, ಅಲ್ತಾಫ್ ಹಾಗೂ ಆಸಿಫ್
ಮೆಹಬೂಬ್, ಇಮ್ತಿಯಾಜ್, ಅಹಮದ್, ಶಾನವಾಜ್, ಅಲ್ತಾಫ್ ಹಾಗೂ ಆಸಿಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT