ಸೋಮವಾರ, ಜೂಲೈ 6, 2020
23 °C

ಕಾರವಾರ: ಕಿಡಿಗೇಡಿಗಳಿಂದ ಮರಕ್ಕೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ನಂದನಗದ್ದಾ ನಾಯ್ಕವಾಡಾದಲ್ಲಿ ಮರವೊಂದಕ್ಕೆ ಕಿಡಿಗೇಡಿಗಳು ಭಾನುವಾರ ಬೆಂಕಿ ಹಚ್ಚಿದ್ದಾರೆ. ಸುತ್ತಮುತ್ತ ತರಗೆಲೆಗಳು ಇದ್ದ ಕಾರಣ ಬೆಂಕಿ ಭಾರಿ ಪ್ರಮಾಣದಲ್ಲಿ ಉರಿದು ಮರವನ್ನು ಸುಟ್ಟಿತು. 

ಗಾಳಿ ಬೀಸುತ್ತಿದ್ದ ಕಾರಣ ಬೆಂಕಿ ಹೊತ್ತಿಕೊಂಡ ತರಗೆಲೆಗಳು ಸುತ್ತಮುತ್ತ ಮನೆಗಳ ಮೇಲೆ ಬೀಳುವ ಆತಂಕ ಮೂಡಿತ್ತು. ಕೊನೆಗೇ ಸ್ಥಳೀಯರೇ ಸೇರಿಕೊಂಡು ಬೆಂಕಿ ನಂದಿಸಿದರು. ಸಮೀಪದಲ್ಲೇ ವಿದ್ಯುತ್ ತಂತಿಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಸ್ಕಾಂ ವಿದ್ಯುತ್ ‍‍ಪೂರೈಕೆ ಸ್ಥಗಿತಗೊಳಿಸಿತ್ತು. 

ಈ ಪ್ರದೇಶದಲ್ಲಿ ಕಿಡಿಗೇಡಿಗಳಿಂದ ತೊಂದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು