ಮಂಗಳವಾರ, ಮೇ 24, 2022
30 °C

ಪ್ರೊಗ್ರೆಸ್ಸಿವ್ ಶಿಕ್ಷಣ ಸಂಸ್ಥೆಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇಲ್ಲಿನ ಗಾಂಧಿನಗರದಲ್ಲಿರುವ ಪ್ರೊಗ್ರೆಸ್ಸಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಸದಸ್ಯರ ಆಯ್ಕೆಗೆ ಬುಧವಾರ ಚುನಾವಣೆ ನಡೆಯಿತು. ಹದಿಮೂರು ಸದಸ್ಯ ಸ್ಥಾನಕ್ಕೆ ಹದಿನೈದು ಮಂದಿ ಸ್ಪರ್ಧಿಸಿದ್ದರು.

ಒಟ್ಟೂ ಸದಸ್ಯರ ಪೈಕಿ ಶೇ.79.60 ಮಂದಿ ಮತ ಚಲಾಯಿಸಿದ್ದರು. ಕಡಿಮೆ ಮತ ಪಡೆದ ವಸಂತ್ ನೆತ್ರೇಕರ್ ಮತ್ತು ಜಗನ್ನಾಥ್ ಭಟ್ಕಳ ಪರಾಭವಗೊಂಡರು.

ಆಡಳಿತ ಮಂಡಳಿಗೆ ಈಶ್ವರ ಸಿ.ನಾಯ್ಕ, ಜಿ.ಜಿ.ಹೆಗಡೆ ಕಡೆಕೋಡಿ, ಚಂದ್ರಶೇಖರ ಶಿವನಂಚಿ, ಪರಮಾನಂದ ಹೆಗಡೆ, ಮಂಜುನಾಥ ಎನ್.ಹೆಗಡೆ, ಮೋಹಿನಿ ಎಂ.ಬೈಲೂರ, ರಮೇಶ ಎನ್.ದುಬಾಶಿ, ರಾಜಾರಾಮ ಕೆ.ಹೆಗಡೆ, ವಿಶ್ವನಾಥ ಜಿ.ಭಟ್ಟ, ಶಾಂತಾ ಎನ್.ಬಾರಕೂರ, ಸುಮಾ ಆರ್.ಉಗ್ರಾಣಕರ, ಸೂರಜರಾಣಿ ಎಂ.ಪ್ರಭು, ಹರೀಶ ಎನ್.ಪಂಡಿತ ಆಯ್ಕೆಯಾದರು. ಆಯ್.ಪಿ.ಹೆಗಡೆ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.