ಶುಕ್ರವಾರ, ಜನವರಿ 28, 2022
23 °C

ಗಮನ ಸೆಳೆದ ದೂಧ್‌ಸಾಗರ್ ದೃಶ್ಯಕಾವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದ ಯುವಕ ರೋಹನ್ ಕುಡಾಲ್ಕರ್ ಎಂಬುವವರು ಕ್ಯಾಮೆರಾದಲ್ಲಿ ಸೆರೆಹಿಡಿದ, ಪ್ರಸಿದ್ಧ ಪ್ರವಾಸಿ ತಾಣ ದೂಧ್‌ಸಾಗರ್‌ನ ಚಿತ್ರವೊಂದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಟ್ಟದ ಮೇಲಿನಿಂದ ಧುಮ್ಮಿಕ್ಕುವ ನೀರಿನ ಸಮೀಪದಲ್ಲಿ ಸಾಗುತ್ತಿರುವ ರೈಲಿನ ಚಿತ್ರವನ್ನು ಅವರು ಕ್ಲಿಕ್ಲಿಸಿದ್ದರು. ಅದನ್ನು ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಂ’ನ ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದರು. ಅದನ್ನು ಲಕ್ಷಾಂತರ ಮಂದಿ ‘ಶೇರ್’ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ‘ಇನ್‌ಕ್ರೆಡಿಬಲ್ ಇಂಡಿಯಾ’ ಯೋಜನೆಯ ಅಧಿಕೃತ ಟ್ವಿಟರ್ ಖಾತೆ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ‘ಟ್ರಿಪ್ ಟು ದ ಕಮ್ಯುನಿಟಿ’, ‘ಟ್ರಾವೆಲ್ ಇಂಡಿಯಾ’ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸಾಮಾಜಿಕ ಜಾಲತಾಣಗಳ ಪುಟಗಳಲ್ಲೂ ಈ ಚಿತ್ರ ಪ್ರಕಟವಾಗಿದೆ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು