ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆ: ಹೆದ್ದಾರಿ ಬದಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ-ಜಿಲ್ಲಾಧಿಕಾರಿ

ಮಳೆ ಹಾನಿ ಎದುರಿಸುವ ಸಂಬಂಧ ಸಭೆಯಲ್ಲಿ ಸೂಚನೆ
Last Updated 3 ಮೇ 2019, 14:17 IST
ಅಕ್ಷರ ಗಾತ್ರ

ಕಾರವಾರ:ರಾಷ್ಟ್ರೀಯ ಹೆದ್ದಾರಿ66ರ ಚತುಷ್ಪಥ ಕಾಮಗಾರಿಯ ಕಾರಣ ಜಿಲ್ಲೆಯ ವಿವಿಧೆಡೆನೈಸರ್ಗಿಕವಾದ ಚರಂಡಿಗಳ ಮೂಲಕ ನೀರು ಹರಿಯಲುಅಡ್ಡಿಯಾಗಿರುವ ಸಾಧ್ಯತೆಯಿದೆ. ಆದ್ದರಿಂದ ಅದನ್ನು ತೆರವು ಮಾಡಿಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಮುಂಗಾರು ಮಳೆ ಹಾನಿ ಎದುರಿಸುವ ಕುರಿತುಶುಕ್ರವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆಸಿದರು.

ಹೆದ್ದಾರಿ ವಿಸ್ತರಣೆಗೆಹಲವು ಕಡೆಗಳಲ್ಲಿ ಗುಡ್ಡಗಳನ್ನು ಕಡಿಯಲಾಗಿದೆ. ಅವು ಮಳೆಗಾಲ ಕುಸಿಯದಂತೆ ಈಗಲೇ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕು.ಮಳೆಯಿಂದ ಆಗಬಹುದಾದ ಅನಾಹುತ ತಡೆಯಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯವಶ್ಯಕಎಂದು ತಾಕೀತು ಮಾಡಿದರು.

ಆಯಾ ಉಪ ಉಪವಿಭಾಗದ ಸಹಾಯಕ ಆಯುಕ್ತರಿಗೆ ವಿಪತ್ತು ನಿರ್ವಹಿಸುವ ಎಲ್ಲ ಅಧಿಕಾರಗಳನ್ನು ನೀಡಲಾಗಿದೆ. ಉಪ ವಿಭಾಗಾಧಿಕಾರಿಗಳುಉತ್ತರದಾಯಿಗಳಾಗಿರುತ್ತಾರೆ. ಒಂದು ವಾರದೊಳಗೆ ಎಲ್ಲಾ ಇಲಾಖೆಗಳು ಒಂದು ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜನ– ಜಾನುವಾರು ರಕ್ಷಿಸುವಂತಹ ಕಾರ್ಯಕ್ಕೆ ಕ್ರಿಯಾ ಯೋಜನೆಯಲ್ಲಿ ಮೊದಲ ಆದ್ಯತೆ ನೀಡಬೇಕು‌. ಆಸ್ತಿ– ಪಾಸ್ತಿ ಹಾನಿಯಾಗುವ ಸಾಧ್ಯತೆಗಳತ್ತಲೂ ಗಮನ ಹರಿಸಬೇಕು. ತುರ್ತು ಪರಸ್ಥಿತಿಯಲ್ಲಿ ಸಂಪರ್ಕಿಸಲು ಸಹಾಯವಾಣಿ ಕೇಂದ್ರಗಳ ವ್ಯವಸ್ಥೆ ಮಾಡಿಕೊಳ್ಳಬೇಕು.ಅಧಿಕಾರಿಗಳ ಸಂವಹನವೂ ವ್ಯವಸ್ಥಿತವಾಗಿರಲಿ ಎಂದು ತಿಳಿಸಿದರು.

ಇಲಾಖೆಗಳ ಮಧ್ಯೆಸಮನ್ವಯ:ಮಳೆ, ಗಾಳಿಯಿಂದ ಮರಗಳು, ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗುವಂತಹಸಂದರ್ಭಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಇಲಾಖೆಗಳ ನಡುವೆ ಸಮನ್ವಯವಿರಬೇಕು.ಕಳೆದ ಮಳೆಗಾಲ ಜಾನುವಾರನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಿಲ್ಲ, ಸೂಕ್ತ ಲಸಿಕೆ ನೀಡಿಲ್ಲ ಎಂಬ ದೂರುಗಳಿವೆ. ಇವು ಮರುಕಳಿಸದಂತೆ ಪಶು ಸಂಗೋಪನಾ ಇಲಾಖೆ ಗಮನ ಹರಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಎಲ್ಲ ನಗರ, ಗ್ರಾಮೀಣ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆಗೆ,ಹೂಳು ತೆಗೆಯುವ ಕಾರ್ಯವನ್ನು ಈಗಿನಿಂದಲೇ ಆರಂಭಿಸಬೇಕು. ವಿಪತ್ತು ನಿರ್ವಹಣೆಯ ಕ್ರಿಯಾ ಯೋಜನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT