ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಹಿಂಗಾರು ಕೃಷಿಗೆ ವರವಾದ ಅಕಾಲಿಕ ಮಳೆ

ಕುಮಟಾ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ 322 ಹೆಕ್ಟೇರ್ ಶೇಂಗಾ ಬಿತ್ತನೆ
Last Updated 15 ಜನವರಿ 2021, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬೇರೆ ಬೇರೆ ಕಡೆ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದೆ. ಆದರೆ, ತಾಲ್ಲೂಕಿನಲ್ಲಿ ಶೇಂಗಾ, ಉದ್ದು, ಹಿಂಗಾರು ಭತ್ತದ ಬೆಳೆಗೆ ಅನುಕೂಲವಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ಹಿಂಗಾರು ಭತ್ತ ನಾಟಿಯಾದ ಕೆಲವು ದಿನಗಳಲ್ಲಿ ಮಳೆ ಬಂದಿದ್ದರಿಂದ ಭತ್ತದ ಸಸಿಗೆ ನೀರಿನ ಅನುಕೂಲತೆಯಾಗಿದೆ. ಹಲವು ಪ್ರದೇಶಗಳಲ್ಲಿ ಶೇಂಗಾ, ಉದ್ದು, ಹೆಸರು ಬೆಳೆ ಬಿತ್ತನೆ ಮಾಡಿದ ಮರುದಿನವೇ ಮಳೆಯಾಗಿತ್ತು. ಕೆಲವೆಡೆ ಮಾತ್ರ ಬೀಜ ಕೊಳೆತು ಹಾನಿಯಾಗಿದೆ. ಆದರೆ, ಆ ಭಾಗದ ಕೃಷಿಕರು ಮಳೆ ನಿಂತ ಮೇಲೆ ಪುನಃ ಬಿತ್ತನೆ ಮಾಡಿದ್ದಾರೆ. ಈ ಮೂಲಕ ಮಳೆಯಿಂದ ಉಂಟಾದ ಮಣ್ಣಿನ ಪಸೆಯ ಲಾಭ ಪಡೆದುಕೊಂಡಿದ್ದಾರೆ.

‘ತಾಲ್ಲೂಕಿನ ಕುಮಟಾ ಹೋಬಳಿಯಲ್ಲಿ ನಾಲ್ಕು ಹೆಕ್ಟೇರ್, ಕೂಜಳ್ಳಿ ಹೋಬಳಿಯಲ್ಲಿ 260 ಹೆಕ್ಟೇರ್, ಮಿರ್ಜಾನ ಹಾಗೂ ಗೋಕರ್ಣ ಹೋಬಳಿಗಳಲ್ಲಿ ಕ್ರಮವಾಗಿ 30 ಹಾಗೂ 40 ಹೆಕ್ಟೇರ್ ಪ್ರದೇಶಗಳಲ್ಲಿ ಹಿಂಗಾರು ಭತ್ತ ನಾಟಿ ಮಾಡಲಾಗಿದೆ. ಕೂಜಳ್ಳಿ ಹೋಬಳಿಯ 110 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ನಾಲ್ಕೂ ಹೋಬಳಿಗಳಲ್ಲಿ ಸುಮಾರು 322 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರಶ್ಮಿ ಶಾಪುರಕರ್ ತಿಳಿಸಿದ್ದಾರೆ.

‘ಉದ್ದು, ಹೆಸರು, ಅಲಸಂದೆ ಸೇರಿ 40 ಹೆಕ್ಟೇರ್ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. ಆದರೆ, ಎಲ್ಲಿಯೂ ಮಳೆಯಿಂದ ಬಿತ್ತಿದ ಬೆಳೆ ಹಾಳಾದ ಬಗ್ಗೆ ವರದಿ ಬಂದಿಲ್ಲ. ಬಿತ್ತನೆ ನಂತರ ಬಿದ್ದಿರುವ ಮಳೆ ಅನುಕೂಲಕರವಾಗಿ ಪರಿಣಮಿಸಿದೆ’ ಎಂದು ಅವರು ಹೇಳಿದ್ದಾರೆ.

ಈರುಳ್ಳಿ, ಕಲ್ಲಂಗಡಿಗೆ ಹಾನಿ:ತಾಲ್ಲೂಕಿನ ವನ್ನಳ್ಳಿಯಲ್ಲಿ ಈಚೆಗೆ ಮೋಡದ ವಾತಾವರಣ ಉಂಟಾಗಿ ಸುರಿದ ಮಳೆಗೆ ತೋಟಗಾರಿಕಾ ಬೆಳೆಗಳಾದ ಸಿಹಿ ಈರುಳ್ಳಿ ಹಾಗೂ ಕಲ್ಲಂಗಡಿ ಬೆಳೆ ನಾಶವಾಗಿದೆ ಎಂದು ಪ್ರಗತಿಪರ ಕೃಷಿಕ ನಿತ್ಯಾನಂದ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT