ಶುಕ್ರವಾರ, ಆಗಸ್ಟ್ 19, 2022
22 °C

ಫೆಸಿಫಿಕ್ ರಿಡ್ಲೆ ಕಡಲಾಮೆಯ ಕಳೇಬರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಳಿವಿನ ಅಂಚಿನಲ್ಲಿರುವ ‘ಫೆಸಿಫಿಕ್ ರಿಡ್ಲೆ ಕಡಲಾಮೆ’ಯೊಂದರ (ಲೆಪಿಡೊಕೆಲಿಸ್ ಓಲಿವೆಸಿ) ಕಳೇಬರವು ಇಲ್ಲಿನ ಕೋಡಿಬಾಗದ ಸೇತುವೆಯ ಬಳಿ ಭಾನುವಾರ ಕಂಡುಬಂದಿದೆ.

ಆಮೆಯ ಕಳೇಬರವು ಕೊಳೆತಿದ್ದು, ಮೀನು ಹಿಡಿಯಲು ಬೀಸಿದ್ದ ಬಲೆಗೆ ಸಿಲುಕಿ ಹೊರಬರಲಾಗದೇ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ.

ಅಂತರರಾಷ್ಟ್ರೀಯ ಪರಿಸರ ಮತ್ತು ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ (ಐ.ಯು.ಸಿ.ಎನ್) ಪ್ರಕಾರ ಈ ಪ್ರಭೇದದ ಕಡಲಾಮೆಗಳ ಸಂತತಿಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೆಚ್ಚಾಗಿ ಸಮಶೀತೋಷ್ಣ ವಲಯದ ಸಮುದ್ರದಲ್ಲಿ ವಾಸಿಸುವು ಇವು ಎರಡರಿಂದ ಎರಡೂವರೆ ಅಡಿಗಳಷ್ಟು ದೊಡ್ಡದಾಗಿ ಬೆಳೆಯುತ್ತದೆ. ಸಮುದ್ರದಲ್ಲಿ 150 ಮೀಟರ್‌ಗಳಷ್ಟು ಆಳದಲ್ಲೂ ಜೀವಿಸಬಲ್ಲ ಸಾಮರ್ಥ್ಯ ಹೊಂದಿವೆ. ಇವುಗಳು 50ರಿಂದ 60 ವರ್ಷಗಳ ಜೀವಿತಾವಧಿ ಹೊಂದಿವೆ ಎಂದು ನಗರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ರಾಥೋಡ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು