ಭಾನುವಾರ, ಡಿಸೆಂಬರ್ 4, 2022
21 °C

‘ಅಮೃತ ಸ್ವಾತಂತ್ರ್ಯ’: ಮಾಜಿ ಯೋಧನಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ನಗರದ ನಿವಾಸಿ, ಮಾಜಿ ಯೋಧ ಕಶ್ಮೀರ್ ಫಿಲಿಪ್ ರೊಸಾರಿಯೋ ಅವರನ್ನು ಸೋಮವಾರ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು.

1932ರಲ್ಲಿ ಜನಿಸಿದ್ದ ಕಶ್ಮೀರ್ ಅವರಿಗೆ ಈಗ 90 ವರ್ಷ. 1947ರಲ್ಲಿ ಅವರು ಭೂಸೇನೆಗೆ ಸಿಪಾಯಿಯಾಗಿ  ನೇಮಕಾತಿಯಾದಾಗ ಅವರಿಗೆ 15 ವರ್ಷ. 25 ವರ್ಷ ಸೇವೆ ಸಲ್ಲಿಸಿ 1972ರಲ್ಲಿ ನಿವೃತ್ತಿ ಹೊಂದಿದರು. ಕಾಶ್ಮೀರದಿಂದ ಚಂಡೀಗಢದವರೆಗೆ ಹಲವು ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1971ರಲ್ಲಿ ಭಾರತ- ಪಾಕ್ ಯುದ್ಧದ ಸಂದರ್ಭ ಆರ್ಮಿ ಯುನಿಟ್‌ನಲ್ಲಿದ್ದರು.

ದೇಶದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ, ನಗರದ ಜೆ.ಇ.ಒ ಮಿಲ್ ರಸ್ತೆಯಲ್ಲಿರುವ ಅವರ ಮನೆಗೆ ತೆರಳಿದ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು ಸನ್ಮಾನಿಸಿದರು.

ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಮದರ್ ಥೆರೆಸಾ ಸಂಸ್ಥೆಯ ಸ್ಯಾಮ್ಸನ್ ಡಿಸೋಜಾ, ಸಿರಿಲ್ ಗೊನ್ಸಾಲಿಸ್, ಐರಿನ್ ಗೊನ್ಸಾಲಿಸ್, ಸ್ಯಾಮ್ಸನ್ ಡಿಸೋಜಾ, ಪ್ರಮುಖರಾದ ರಾಜೀವ ನಾಯ್ಕ, ಸಿ.ಎನ್.ನಾಯ್ಕ, ಸುರೇಶ ನಾಯ್ಕ, ಕಾಶೀನಾಥ ನಾಯ್ಕ, ಖೈರುನ್ನೀಸಾ ಶೇಖ್, ಸೂರಜ್ ಕುರುಮಕರ್, ಕಶ್ಮೀರ್ ಅವರ ಪುತ್ರಿ ರೋಸೆಡಾ, ಅಳಿಯ ಡೆರೆಲ್, ಮೊಮ್ಮಕ್ಕಳಾದ ಡೆಲ್ಸಿಯಾ, ಎನಾಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು