ಭಾನುವಾರ, ಮೇ 22, 2022
23 °C

ಜಯಾ ಯಾಜಿ ಶಿರಾಲಿ ಗೌರವಾರ್ಥ ಕಥಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಹಿರಿಯ ಕಥೆಗಾರ್ತಿ ದಿ.ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ, ಕನ್ನಡದ ಕಥೆಗಾರ್ತಿಯರಿಗಾಗಿಯೇ ರಾಜ್ಯಮಟ್ಟದ ಕಥಾ ಸ್ಪಧೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಮ್ಮಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ‘ಕಥಾಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನಗಳಿಗೆ ಕ್ರಮವಾಗಿ ₹ 6,000, ₹ 3,000, ₹ 2,000 ಹಾಗೂ ಮೆಚ್ಚುಗೆ ಬಹುಮಾನ ಪಡೆದ ಇಬ್ಬರಿಗೆ ತಲಾ ₹ 1,000 ಪ್ರದಾನ ಮಾಡಲಾಗುವುದು. ಉತ್ತಮ ಕಥೆ ಬರೆದ ಒಬ್ಬರು ಕಾಲೇಜು ವಿದ್ಯಾರ್ಥಿನಿಗೆ ₹ 2,000 ಬಹುಮಾನ ನೀಡಲಾಗುವುದು. ವಿಜೇತರಿಗೆ ಅಭಿನಂದನಾ ಪತ್ರವನ್ನೂ ವಿತರಿಸಲಾಗುವುದು’ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿನಿಯರು ಕಥೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಕಥೆಗಳು 2,500 ಶಬ್ದಗಳಿಗೆ ಮೀರದಂತೆ ಇರಬೇಕು. ಫೆ.23ರ ಒಳಗಾಗಿ ಕಥೆ ಕಳುಹಿಸಬೇಕು.

ವಿಳಾಸ: ಅರವಿಂದ ಕರ್ಕಿಕೋಡಿ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ‘ಕನ್ನಡದ ಹಣತೆ’, ಜೆ.ಎಂ.ಎಫ್.ಸಿ. ಕೋರ್ಟ್ ಪಕ್ಕ, ಕೋರ್ಟ್ ರಸ್ತೆ, ಕುಮಟಾ ಅಂಚೆ ಮತ್ತು ತಾಲ್ಲೂಕು (ಉತ್ತರ ಕನ್ನಡ ಜಿಲ್ಲೆ) – 581343.

ನುಡಿ ತಂತ್ರಾಂಶದಲ್ಲಿ ಕಥೆ ಕಳುಹಿಸುವವರು ಇ-ಮೇಲ್: kannadadahanate56@gmail.comಗೂ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ವಾಟ್ಸ್‌ಆ್ಯಪ್ ಸಂಖ್ಯೆ: 96116 50066 ಸಂಪರ್ಕಿಸಬಹುದು.

ಜಯಾ ಅವರಿಗೆ 2020ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಪ್ರಕಟಿಸಿತ್ತು. ತೀವ್ರ ಅನಾರೋಗ್ಯದಿಂದಾಗಿ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಕೆಲವೇ ದಿನಗಳಲ್ಲಿ ಅವರು ನಿಧನರಾದರು. ಅವರ ಕುಟುಂಬದವರ ಅಭಿಪ್ರಾಯದಂತೆ ಪ್ರಶಸ್ತಿಯ ₹ 15 ಸಾವಿರವನ್ನು ಕಥಾ ಸ್ಪರ್ಧೆಯ ವಿಜೇತರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.