ಬುಧವಾರ, ಏಪ್ರಿಲ್ 14, 2021
31 °C

ಮುರ್ಡೇಶ್ವರ ಕಡಲತೀರದಲ್ಲಿ ಮೂವರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ತಾಲ್ಲೂಕಿನ‌ ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿ ಅಲೆಗೆ ಸಿಕ್ಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ಭಾನುವಾರ ರಕ್ಷಣೆ ಮಾಡಿದ್ದಾರೆ.
   
ಬೆಂಗಳೂರು ಕತ್ರೆಗುಪ್ಪೆಯಿಂದ ಮುರ್ಡೆಶ್ವರಕ್ಕೆ  ಪ್ರವಾಸಕ್ಕೆ ಬಂದಿದ್ದ ವಿ.ಸಂಜಯ (18),  ವಿ.ಸಂಜನಾ (15) ಹಾಗೂ ಕಾಂದಲಮ್ಮಾ(40) ಅಪಾಯದಿಂದ ಪಾರಾದವರು.  

ಬೆಳಿಗ್ಗೆ ಅವರು ಸಮುದ್ರಕ್ಕೆ ಈಜಲು ಹೋಗಿದ್ದರು. ಪ್ರವಾಸಿರು ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಓಸಿಯನ್ ಅಡ್ವಂಚರ್ಸ್  ಸಿಬ್ಬಂದಿ ಹಾಗೂ ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು