ಬುಧವಾರ, ಫೆಬ್ರವರಿ 26, 2020
19 °C
ಶ್ರೀ ಶಕ್ತಿ ಪಾರಂಪರಿಕ ವೈದ್ಯರ ಚಿಕಿತ್ಸಾ ಕೇಂದ್ರ ಆರಂಭ

‘ವೈದ್ಯ– ಜ್ಯೋತಿಷ್ಯ ಒಂದೇ ನಾಣ್ಯದ ಎರಡು ಮುಖ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ವೈದ್ಯ ಹಾಗೂ ಜ್ಯೋತಿಷ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲ ಶಾಸ್ತ್ರಗಳು ವೈದ್ಯ ಮತ್ತು ಜ್ಯೋತಿಷ್ಯದಲ್ಲಿ ಅಡಗಿವೆ ಎಂದು ವೇದಮೂರ್ತಿ ನಾಗೇಂದ್ರ ಭಟ್ಟ ಹಿತ್ಲಳ್ಳಿ ಹೇಳಿದರು.

ತಾಲ್ಲೂಕಿನ ಹುಲೇಕಲ್ ಕೆಂಗ್ರೆಮಠದಲ್ಲಿ ಭಾನುವಾರ ನಡೆದ ಶ್ರೀ ಶಕ್ತಿ ಪಾರಂಪರಿಕ ವೈದ್ಯರ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವೈದ್ಯ ಶಾಸ್ತ್ರ ನಮಗೆ ಬದುಕನ್ನು ಕೊಡುತ್ತದೆ. ಅನ್ನಪ್ರಾಶನ ಮಾಡುವಾಗ ತಾಯಿ ಮೊದಲ ತುತ್ತಿನಲ್ಲಿ ವನಸ್ಪತಿಯ ರಸವನ್ನು ಕೊಟ್ಟು, ಆರೋಗ್ಯ ಕಾಪಾಡಿಕೊಳ್ಳುವಂತೆ ಹಾರೈಸುತ್ತಾಳೆ. ಒಂದೆಲಗ, ಕಾಳುಮೆಣಸು, ಬಜೆ ಇವನ್ನು ಚಿಕ್ಕಂದಿನಿಂದ ನಮಗೆ ಕೊಟ್ಟು ನಿಸರ್ಗದ ಜೊತೆ ಬದುಕನ್ನು ಕಲಿಸುತ್ತಾಳೆ’ ಎಂದರು. 

ಪಾರಂಪರಿಕ ವೈದ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ. ಹೆಗಡೆ ಮಕ್ಕಳತಾಯಿಮನೆ ಕೇಂದ್ರವನ್ನು ಉದ್ಘಾಟಿಸಿದರು. ಮಂಗಳೂರಿನ ಅನುಭವಿ ಮತ್ತು ವಂಶ ಪಾರಂಪರಿಕ ವೈದ್ಯರ ಸಂಘದ ಪ್ರಧಾನ ಸಂಯೋಜಕ ಬಿ.ಎಸ್.ಚಂದ್ರು ಮಾತನಾಡಿ, ‘ಶ್ರೀ ಶಕ್ತಿ ಪಾರಂಪರಿಕ ವೈದ್ಯ ಕೇಂದ್ರವು ರಾಜ್ಯ ಮತ್ತು ದೇಶದಲ್ಲಿ ಆರಂಭಗೊಂಡ ಮೊದಲ ಪಾರಂಪರಿಕ ವೈದ್ಯರ ಕೇಂದ್ರವಾಗಿದೆ. ಪಾರಂಪರಿಕ ವೈದ್ಯರು ಅಬಲರಲ್ಲ, ಅವರಿಗೆ ಕಾನೂನಿನ ರಕ್ಷಣೆಯಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ಸಿಗಲಿದೆ. ಅದಕ್ಕೆ ನಿರಂತರ ಹೋರಾಟದ ಅಗತ್ಯವಿದೆ’ ಎಂದರು.

ಪಾರಂಪರಿಕ ಔಷಧವನ್ನು ಪಡೆದು ಕಾಯಿಲೆ ವಾಸಿಮಾಡಿಕೊಂಡ ಬಗ್ಗೆ ಅನೇಕರು ಅನುಭವ ಹಂಚಿಕೊಂಡರು. ಕಿಡ್ನಿಕಲ್ಲು, ತಲೆನೋವು, ಚವಿ ದೋಷ, ಹಲ್ಲುನೋವು ಮೊದಲಾದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲಾಯಿತು. ರಾಮಚಂದ್ರ ಭಟ್ಟ ದೇವಗೊಡ್ಲು ನಿರೂಪಿಸಿದರು. ಸುಮಂಗಲಾ ಹೆಗಡೆ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು