ಬುಧವಾರ, ಸೆಪ್ಟೆಂಬರ್ 29, 2021
19 °C

ಪರಿಸರಸ್ನೇಹಿ ಮೂರ್ತಿ ತಯಾರಿಕೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಅರಿಶಿಣ, ರಾಗಿ ಮತ್ತು ಗೋಧಿ ಹಿಟ್ಟು ಬಳಸಿ ಪರಿಸರಸ್ನೇಹಿ ಗಣಪನಮೂರ್ತಿ ಸಿದ್ಧಪಡಿಸುವ ತರಬೇತಿ ಕಾರ್ಯಕ್ರಮ ನಗರದ ವನಿತಾ ಸಮಾಜ ಮಂದಿರದಲ್ಲಿ ಮಂಗಳವಾರ ನಡೆಯಿತು.

ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯೂಥ್ ಫಾರ್ ಸೇವಾ ಸಂಸ್ಥೆ ವತಿಯಿಂದ  ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಪರಿಸರಸ್ನೇಹಿ ಮೂರ್ತಿ ತಯಾರಿಸುವುದನ್ನು ಕಲಿತರು. ಅರಿಶಿಣದ ಹಿಟ್ಟಿಗೆ ರಾಗಿ ಅಥವಾ ಗೋಧಿ ಹಿಟ್ಟು ಮಿಶ್ರಣ ಮಾಡಿ ಪುಟ್ಟ ಗಾತ್ರದ ಮೂರ್ತಿ ಸಿದ್ಧಪಡಿಸುವುದನ್ನು ಮಕ್ಕಳಿಗೆ ಯೂಥ್ ಫಾರ್ ಸೇವಾ ಸಂಸ್ಥೆಯವರು ಕಲಿಸಿಕೊಟ್ಟರು.

‘ರಾಸಾಯನಿಕ ಬಳಸಿದ ಮೂರ್ತಿಗಳ ಬದಲು ಪರಿಸರಕ್ಕೆ ಪೂರಕವಾದ ಸಾಮಗ್ರಿ ಬಳಸಿ ಸಿದ್ಧಪಡಿಸಿದ ಮೂರ್ತಿ ಬಳಸುವುದು ಸೂಕ್ತ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಹೇಳಿದರು.

ನಗರಸಭೆ ಕಚೇರಿ ವ್ಯವಸ್ಥಾಪಕ ಎನ್.ಎಂ.ಮೇಸ್ತ, ಯೂಥ್ ಫಾರ್ ಸೇವಾ ಸಂಸ್ಥೆಯ ಉಮಾಪತಿ ಭಟ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.