ಸೋಮವಾರ, ಜುಲೈ 26, 2021
26 °C

ಮತ್ತಿಬ್ಬರಿಗೆ ಕೋವಿಡ್ 19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೋವಿಡ್ 19 ಭಾನುವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಪ್ರಸ್ತುತ 32 ಸಕ್ರಿಯ ಪ್ರಕರಣಗಳಿದ್ದು, ಎಲ್ಲರ ಆರೋಗ್ಯವೂ ಚೇತರಿಸುತ್ತಿದೆ.

ಹೊಸ ಪ್ರಕರಣಗಳಲ್ಲಿ ಒಬ್ಬರು 24 ವರ್ಷದ ಮಹಿಳೆಯಾಗಿದ್ದು, ಕತಾರ್‌ನಿಂದ ವಾಪಸಾಗಿದ್ದ ಕೋವಿಡ್ 19 ಪೀಡಿತ ಪುರುಷನ ‍ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಮತ್ತೊಬ್ಬ 14 ವರ್ಷದ ಬಾಲಕನಾಗಿದ್ದು, ಕೇರಳದಿಂದ ಹಳಿಯಾಳಕ್ಕೆ ವಾಪಸಾಗಿದ್ದ. 

ಜಿಲ್ಲೆಯಲ್ಲಿ ಒಟ್ಟು 96 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಈ ಪೈಕಿ ಈಗಾಗಲೇ 64 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು