ಕಾಡುಪ್ರಾಣಿಗಳಿಗೂ ನೀರಿನ ಕೊರತೆ

ಮಂಗಳವಾರ, ಮೇ 21, 2019
24 °C
ಜೊಯಿಡಾ: ಸೂಪಾ ಅಣೆಕಟ್ಟೆಯ ಹಿನ್ನೀರಿಗೆ ಹಿಂಡುಹಿಂಡಾಗಿ ಧಾವಿಸಿದ ಕಾಡುಕೋಣಗಳು

ಕಾಡುಪ್ರಾಣಿಗಳಿಗೂ ನೀರಿನ ಕೊರತೆ

Published:
Updated:
Prajavani

ಜೊಯಿಡಾ: ಸೂಪಾ ಅಣೆಕಟ್ಟಿನ ಸುತ್ತಮುತ್ತಲಿನ ಅರಣ್ಯ ಈ ಬಾರಿ ಬಿಸಿಲಿಗೆ ಬಾಡಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹಳ್ಳಕೊಳ್ಳಗಳು ಬತ್ತಿಹೋಗಿವೆ. ಹೀಗಾಗಿ ಕಾಡುಪ್ರಾಣಿಗಳು ದಾಹ ತೀರಿಸಿಕೊಳ್ಳಲು ನಾಡು, ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿವೆ. ಇಂತಹ ದೃಶ್ಯವೊಂದು ಜಲಾಶಯದ ಹಿನ್ನೀರಿನ ದೊಣಪಾ ಪ್ರದೇಶದಲ್ಲಿ ಬುಧವಾರ ಕಂಡುಬಂತು.

ಅರಣ್ಯ ಇಲಾಖೆಯಿಂದ ಪ್ರಯತ್ನ: ಅರಣ್ಯ ಇಲಾಖೆಯು ಕಾಳಿ ಸಂರಕ್ಷಿತ ಪ್ರದೇಶವಾದ ವಿನೋಲಿ, ಪಣಸೋಲಿ, ಕುಳಗಿ, ಅಣಶಿ ಸೇರಿದಂತೆ ವನ್ಯಜೀವಿ ವಲಯ ಹಾಗೂ ನಾಡಂಚಿನ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಆದರೆ, ಇದು ಕಾಡುಪ್ರಾಣಿಗಳಿಗೆ ಸಾಕಾಗುತ್ತಿಲ್ಲ. ಜಲಮೂಲವನ್ನು ಅರಸಿ ನಾಡಿನತ್ತ ಹಾಗೂ ಸೂಪಾ ಜಲಾಶಯದ ಹಿನ್ನೀರಿನತ್ತ ಬರುತ್ತಿವೆ.

ಅಪಾಯದ ಪಯಣ: ಕಾಡುಕೋಣಗಳು, ಚಿಗರೆ, ಸಾರಂಗ, ವಿವಿಧ ಜಾತಿಯ ಸಸ್ತನಿಗಳು, ಆನೆಗಳು ಕೂಡಾ ಜಲಾಶಯದ ನೀರಿನತ್ತ ಓಡೋಡಿ ಬರುತ್ತಿವೆ. ಇದು ದಿನನಿತ್ಯದ ದೃಶ್ಯವಾಗಿದೆ. ಜೀವಜಲದ ದಾಹ ತೀರಿಸಿಕೊಳ್ಳುವ ಈ ಪಯಣದಲ್ಲಿ ರಸ್ತೆ ಅಂಚಿನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪುವ ಸಂಭವ ಕೂಡ ಇದೆ. ಕಾಡು ಪ್ರಾಣಿಗಳು ನಾಯಿ, ಕಳ್ಳ ಬೇಟೆಗಾರರ ಜಾಲಕ್ಕೆ ಸಿಲುಕುವ ಅಪಾಯವಿದೆ. ದಾರಿಯಲ್ಲಿ ಗಾಬರಿಯಾಗುವ ಕಾಡುಪ್ರಾಣಿಗಳು ಮನುಷ್ಯರಿಗೂ ಅಪಾಯ ತರುವ ಸಾಧ್ಯತೆಯಿದೆ. 

ಅರಣ್ಯ ಇಲಾಖೆಯು ಕಾಡಿನ ಒಳಗೆ ಸಾಧ್ಯವಾದಷ್ಟು ಕೆರೆ ಕಟ್ಟೆಗಳಿಗೆ ನೀರು ತುಂಬಬೇಕು. ಈ ಮೂಲಕ ಕಾಡು ಪ್ರಾಣಿಗಳು ಜೀವಜಲಕ್ಕಾಗಿ ನಾಡಿನತ್ತ ಬರುವ ಪ್ರಮೇಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ಪ್ರಾಣಿಪ್ರಿಯರ ಒತ್ತಾಯವಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !