ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಸೇತುವೆ ಸಿಮೆಂಟ್ ತೊಲೆ ಮಾದರಿ ಪಡೆದ ತಜ್ಞರ ತಂಡ

Published 8 ಏಪ್ರಿಲ್ 2024, 13:52 IST
Last Updated 8 ಏಪ್ರಿಲ್ 2024, 13:52 IST
ಅಕ್ಷರ ಗಾತ್ರ

ಕುಮಟಾ: ಕೆಲ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿಯೇ ಮುರಿದು ಬಿದ್ದ ತಾಲ್ಲೂಕಿನ ಹೆಗಡೆ- ಮಿರ್ಜಾನ ನಡುವಿನ ಅಘನಾಶಿನಿ ಸೇತುವೆಯ ಸಿಮೆಂಟ್ ತೊಲೆಯ ಮಾದರಿಗಳನ್ನು  ಸೋಮವಾರ ಹುಬ್ಬಳ್ಳಿಯ ಎಸ್ಸಾರ್ ಸಂಶೋಧನಾ ಪ್ರಯೋಗ ಶಾಲೆ ಸಿಬ್ಬಂದಿ ಪಡೆದು ಪರಿಶೀಲಿಸಿದರು.

ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಲಾಖೆ ಸಹಾಯಕ ಎಂಜಿನಿಯರ್ ಸೋಮನಾಥ ಭಂಡಾರಿ, ‘ಹುಬ್ಬಳ್ಳಿಯ ಎಸ್ಸಾರ್ ಸಂಶೋಧನಾ ಪ್ರಯೋಗ ಶಾಲೆಯ ಸಿಬ್ಬಂದಿ ತಂಡ ಸಿಮೆಂಟ್ ತೊಲೆಗೆ ಅಳವಡಿಸಿದ್ದ ಕಬ್ಬಿಣದ ಪ್ರಮಾಣ, ಗುಣಮಟ್ಟ ಪರೀಕ್ಷಿಸುವ ಸ್ಕ್ಯಾನಿಂಗ್ ನಡೆಸಿದ್ದಾರೆ. ಸಿಮೆಂಟ್ ಬೀಮ್‌ನ ನಾಶ ತಡೆ ಪರೀಕ್ಷೆ (ಎನ್.ಡಿ.ಟೆಸ್ಟ್)  ನಡೆಸಲಾಗಿದೆ. ಇದರಿಂದ ಸೇತುವೆ ಕಂಬದ ಮೇಲೆ ಇಟ್ಟಿದ್ದ ಸಿಮೆಂಟ್ ತೊಲೆ (ಬೀಮ್) ಗುಣಮಟ್ಟ ನಿಖರವಾಗಿ ಗೊತ್ತಾಗಲಿದೆ’ ಎಂದರು.

ಹೆಚ್ಚಿನ ಮಾಹಿತಿ ನೀಡಿದ ಎಸ್ಸಾರ್ ಪ್ರಯೋಗ ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಫ್ ಅಂಕಲಗಿ, ಪ್ರಯೋಗಾಲಯದಲ್ಲಿ ನಡೆಸುವ ಎಲ್ಲ ಪರೀಕ್ಷೆಗಳ ಮಾದರಿಗಳನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಮಕ್ಷಮವೇ ನಮ್ಮ ಪ್ರಯೋಗಶಾಲೆ ಪಡೆದುಕೊಂಡಿದ್ದಾರೆ. ಅವುಗಳ ವರದಿಯನ್ನು ಇಲಾಖೆಯ ಎಂಜಿನಿಯರ್‌ಗೆ ರವಾನಿಸಲಾಗುವುದು. ವರದಿ ಆಧಾರದ ಮೇಲೆ ಅಧಿಕಾರಿಗಳು ಸೇತುವೆ ನಿರ್ಮಾಣದಲ್ಲಿ ನಿಗದಿಪಡಿಸಿದ ಗುಣಮಟ್ಟ ಕಾಪಾಡಲಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT