ಸಿದ್ದಾಪುರ: ‘ಅಘನಾಶನಿ ನದಿ ತಿರುವು ಯೋಜನೆ ಅವೈಜ್ಞಾನಿಕವಾಗಿದ್ದು, ಈ ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲ. ಅಘನಾಶಿನಿಯನ್ನು ಉಳಿಸಿಕೊಳ್ಳುವುದಕ್ಕೆ ಕಾನೂನು ಹಾಗೂ ವೈಜ್ಞಾನಿಕ ಹೋರಾಟ ಮಾಡುವುದರ ಜೊತೆಗೆ ಈ ಕುರಿತು ಜನಾಂದೋಲನ ಆಗಬೇಕು’ ಎಂದು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹೆಗ್ಗರಣಿ ಪ್ರೌಢಶಾಲಾ ಆವರಣದಲ್ಲಿ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಶನಿವಾರ ಆಯೋಜಿಸಿದ್ದ ಅಘನಾಶಿನಿ ಉಳಿಸಿ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅಘನಾಶಿನಿ ನದಿಯ ಪವಿತ್ರ ನೀರು ವ್ಯರ್ಥವಾಗಿ ಹರಿಯುತ್ತಿಲ್ಲ. ಎಲ್ಲ ಜೀವ ಜಂತುಗಳಿಗೆ ಜೀವನ ನೀಡುತ್ತಿದೆ. ಯೋಜನೆ ಆದರೆ ಮುಖ್ಯವಾಗಿ ಇಲ್ಲಿಯ ಮೀನುಗಾರರಿಗೆ ತೊಂದರೆ ಆಗುವುದಲ್ಲದೇ ಗೋಕರ್ಣ ಕ್ಷೇತ್ರ ದ್ವೀಪ ಆಗುವ ಸಾಧ್ಯತೆ ಇದೆ. ಅಘನಾಶಿನಿ ನದಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದ್ದು, ಎಂದರು.

ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ‘ಅಘನಾಶಿನಿ ನದಿ ತಿರುವು ಯೋಜನೆಯಿಂದಾಗುವ ದುಷ್ಪರಿಣಾಮದ ಕುರಿತು ತಿಳಿಸಿ ನಮ್ಮ ನದಿಯನ್ನು ಹೋರಾಟದ ಮೂಲಕ ಉಳಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ’ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಅಘನಾಶಿನಿ, ಬೇಡ್ತಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅಪಾಯ ಬಂದಿದೆ. ಮೂರು ಯೋಜನೆ ನಿಲ್ಲಬೇಕು. ಇಲ್ಲದಿದರೆ ನಮ್ಮಲ್ಲಿಯ ಸಾಮಾಜಿಕ ವೈವಿಧ್ಯತೆ, ಸಂಸ್ಕೃತಿ ಉಳಿಯುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಯೋಜನೆಯಿಂದಾಂಗುವ ದುಶ್ಪರಿಣಾಮದ ಕುರಿತು ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಈ ಯೋಜನೆಗಳನ್ನು ಯಾರು ಹುಟ್ಟು ಹಾಕಿದ್ದಾರೆ ಗೊತ್ತಿಲ್ಲ. ಈಗಾಗಲೇ ಮುಖ್ಯ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಯೋಜನೆ ವಿರುದ್ಧ ಹೋರಾಟಕ್ಕೆ ಜನರೊಂದಿಗೆ ಇರುತ್ತೇನೆ’ ಎಂದು ಭರವಸೆ ನೀಡಿದರು.

ನಾಗಪತಿ ಗೌಡ ಉಪಸ್ಥಿತಿತರಿದ್ದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಯೋಜನೆಯ ರೂಪು ರೇಷೆ ಕುರಿತು ಮಾಹಿತಿ ನೀಡಿದರು. ಎಂ.ಎಲ್.ಭಟ್ಟ ಉಂಚಳ್ಳಿ ಸ್ವಾಗತಿಸಿದರು. ಬಾಲಚಂದ್ರ ಸಾಯಿಮನೆ ಪ್ರಾಸ್ತಾವಿಕ ಮಾತನಾಡಿದರು.ಜಿ.ಎಂ.ಭಟ್ಟ ಕೋಡಖಂಡ, ಎಸ್.ಡಿ.ಹೆಗಡೆ ಚಾರೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕಿನ ವಿವಿಧ ಕಡೆಗಳಿಂದ ನೂರಾರು ಬೈಕ್ ಸವಾರರು ರ್ಯಾಲಿ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಬೇಡ್ತಿ–ವರದಾ, ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸ್ವರ್ಣವಲ್ಲೀ ಮಠದ ಪೀಠಾದೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.