ಈ ಟ್ವೀಟ್ ಅನ್ನು ಮಂಗಳವಾರ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರ, ‘ಇಂತಹವರಿಂದಲೇ ಸ್ವಚ್ಛ ಭಾರತ ಸಾಕಾರಗೊಳ್ಳುತ್ತಿದೆ. ಅವರ ಶ್ರಮ ವ್ಯರ್ಥವಾಗಬಾರದು. ಅಲ್ಲದೆ ಅವರ ಕೆಲಸಗಳು ಪ್ರಚಾರದಲ್ಲಿ ಹಿಂದುಳಿಯಬಾರದು. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬ ಸಲಹೆಗಳಿದ್ದರೆ ನೀಡಿ’ ಎಂದು ಬರೆದುಕೊಂಡಿದ್ದಾರೆ. ಆನಂದ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.