ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಚಾಕ್‍ಪೀಸ್‍ನಲ್ಲಿ ತಯಾರಾದ ಮಂದಿರದ ಮಾದರಿ ಅನಾವರಣ

Published 23 ಜನವರಿ 2024, 14:25 IST
Last Updated 23 ಜನವರಿ 2024, 14:25 IST
ಅಕ್ಷರ ಗಾತ್ರ

ಕಾರವಾರ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ರಾಮ ಮಂದಿರದ ಮಾದರಿಯಲ್ಲೇ 1200 ಚಾಕ್‍ಪೀಸ್ ಬಳಸಿ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪದ ಪ್ರದೀಪ ನಾಯ್ಕ ರಚಿಸಿದ ಕಲಾಕೃತಿಯನ್ನು ಸೋಮವಾರ ಗೇರುಸೊಪ್ಪ ಬಳಿಯ ಗುತ್ತಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಅನಾವರಣ ಮಾಡಲಾಯಿತು.

ದೇವಾಲಯದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ಟ ದೇವಾಲಯದ ಮಾದರಿಯನ್ನು ಅನಾವರಣಗೊಳಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ, ‘ಕಲೆ ಎನ್ನುವುದು ಯಾವುದೇ ಧರ್ಮ ಜಾತಿ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಅದು ಕಲಾವಿದನ ಸ್ವತ್ತು. ಗ್ರಾಮೀಣ ಭಾಗದ ಪ್ರತಿಭೆಗಳ ಸಾಧನೆ ಜಾಗತಿಕ ಮಟ್ಟದಲ್ಲಿ ಮಿಂಚಬೇಕು’ ಎಂದರು.

ನಗರಬಸ್ತಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಹೆಗಡೆ, ಉಪ್ಪೋಣಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ ನಾಯ್ಕ ಮಾವಿನಹೊಳೆ, ಮಂಜುನಾಥ ನಾಯ್ಕ ಬೊಳ್ಕಾರ, ಹೊನ್ನಾವರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್, ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಮಂಜುನಾಥ ನಾಯ್ಕ ಮಹೇಶ ನಾಯ್ಕ ಅಡಿಗದ್ದೆ, ಕೃಷ್ಣಾ ನಾಯ್ಕ ಪಾಲ್ಗೊಂಡಿದ್ದರು.

ಚಾಕ್‍ಪೀಸ್ ಕಲಾವಿದ ಪ್ರದೀಪ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ನಾಯ್ಕ, ಶರಣಪ್ಪ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT