ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ದನ ಮೇಯಿಸುತ್ತಿರುವಾಗ ಕರಡಿ ದಾಳಿ

Published 21 ಆಗಸ್ಟ್ 2023, 14:24 IST
Last Updated 21 ಆಗಸ್ಟ್ 2023, 14:24 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಪಾಳಾ ಅರಣ್ಯದಂಚಿನ ಗದ್ದೆಯಲ್ಲಿ ದನ ಮೇಯಿಸುತ್ತಿರುವಾಗ ಕರಡಿಯು ಏಕಾಏಕಿ ದಾಳಿ ಮಾಡಿ, ವ್ಯಕ್ತಿಯನ್ನು ಗಾಯಗೊಳಿಸಿದೆ.

ಚಿಕ್ಕಪ್ಪ ನಿಂಗಪ್ಪ ಮಾವುರ (36) ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಕರಡಿ ದಾಳಿಯಿಂದ ಗಾಯಗೊಂಡ ಚಿಕ್ಕಪ್ಪ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

'ದನ ಮೇಯಿಸುತ್ತಿರುವಾಗ ಎರಡು ಮರಿ ಜೊತೆ ತಾಯಿ ಕರಡಿ ಪ್ರತ್ಯಕ್ಷವಾಗಿ ದಾಳಿ ಮಾಡಿತು. ಗಾಬರಿಗೊಂಡು ಕೂಗಾಡಿದಾಗ ಸನಿಹದಲ್ಲಿಯೇ ಇದ್ದ ಸುರೇಶ ಸ್ಥಳಕ್ಕೆ ಧಾವಿಸಿ ಕಟ್ಟಿಗೆಯಿಂದ ಹೊಡೆಯಲು ಮುಂದಾದಾಗ ಕರಡಿ ಅರಣ್ಯದತ್ತ ಹೋಗಿದೆ. ಸಹಾಯಕ್ಕೆ ಸುರೇಶ ಬರದಿದ್ದರೇ ಗಂಭೀರವಾಗಿ ಗಾಯಗೊಳಿಸುತ್ತಿತ್ತು' ಎಂದು ಗಾಯಾಳು ಚಿಕ್ಕಪ್ಪ ಹೇಳಿದರು.

'ಫಾರೆಸ್ಟ್ ಸರ್ವೆ ನಂ.71ರ ಮಂಜೂರಿ ಜಮೀನಿನಲ್ಲಿ ದನ ಮೇಯಿಸುತ್ತಿರುವಾಗ ಚಿಕ್ಕಪ್ಪ ಎಂಬುವರ ಮೇಲೆ ಕರಡಿ ದಾಳಿ ಮಾಡಿ, ಕೈ ಹಾಗೂ ಎದೆಯ ಭಾಗದಲ್ಲಿ ಗಾಯ ಮಾಡಿದೆ. ಗಾಯಾಳು ಚಿಕ್ಕಪ್ಪನ ಒಂದು ಕೈ ಮೊದಲೇ ಶಕ್ತಿಹೀನವಾಗಿದ್ದು, ಮತ್ತೊಂದು ಕೈಗೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಾಳು ಚಿಕ್ಕಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ' ಎಂದು ಕಾತೂರ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT