ಭಟ್ಕಳ: ಭಟ್ಕಳ ಶಹರ, ಗ್ರಾಮೀಣ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರಿಂದ ಪಟ್ಟಣದ ಶಹರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಐದು ದಿನಗಳ ಗಣೇಶೋತ್ಸವದ ಅಂಗವಾಗಿ ಮೂರನೇ ದಿನವಾದ ಶುಕ್ರವಾರ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಹೊರಗಿನಿಂದ ಯಾವುದೇ ದೇಣಿಗೆ ಸಂಗ್ರಹಿಸದೇ, ಠಾಣೆಯ ಸಿಬ್ಬಂದಿಯೆ ತಮ್ಮ ವೆಚ್ಚದಲ್ಲಿ ಕಳೆದ 4 ವರ್ಷಗಳಿಂದ ಅನ್ನದಾನ ಸೇವೆ ನಡೆಸುತ್ತಾ ಬಂದಿದ್ದಾರೆ. ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ.ಜಿ, ಡಿವೈಎಸ್ಪಿ ಮಹೇಶ್ ಕೆ, ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್, ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಮುರುಡೇಶ್ವರ ಠಾಣೆಯ ಸಿಪಿಐ ಸಂತೋಷ ಕಾಯ್ಕಿಣಿ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.

ಎಸೈ ರಾಮಚಂದ್ರ ವೈದ್ಯ, ರಮೇಶ ಪಟಗಾರ, ರಾಜೇಶ್ ನಾಯ್ಕ, ಹವಾಲ್ದಾರ ವಿನಾಯಕ ಪಾಟೀಲ್, ದೇವು ನಾಯ್ಕ, ಮಂಜು ನಾಯ್ಕ, ಮಲ್ಲಿಕಾರ್ಜುನ ನಾಯ್ಕ, ಗಿರೀಶ ನಾಯ್ಕ, ಪಿಸಿ ವಿಲಿಯಂ, ಕಿರಣ್ ಪಾಟೀಲ್ ಹಾಗೂ ಸಿಬ್ಬಂದಿ ಭಕ್ತರಿಗೆ ಅನಾನುಕೂಲವಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದರು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚೂ ಸಾರ್ವಜನಿಕರು ದೇವರ ಪ್ರಸಾದ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.