ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ | ಲಾರಿಗೆ ಬಸ್‌ ಗುದ್ದಿ 12 ಮಂದಿಗೆ ಗಾಯ

Published 19 ಜೂನ್ 2024, 14:03 IST
Last Updated 19 ಜೂನ್ 2024, 14:03 IST
ಅಕ್ಷರ ಗಾತ್ರ

ಯಲ್ಲಾಪುರ: ಚಲಿಸುತ್ತಿದ್ದ ಬಸ್ಸು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು 12 ಜನ ಗಾಯಗೊಂಡ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಡೊಮಗೇರಿ ತಿರುವಿನಲ್ಲಿ ಬುಧವಾರ ಬೆಳಿಗ್ಗೆ 3.30ಕ್ಕೆ ನಡೆದಿದೆ.

ಬಸ್‌ ನಿರ್ವಾಹಕ ಚಂದ್ರಪ್ಪ ಕಪಲೆಪ್ಪ ಅಗಳವಾಡಿ, ಪ್ರಯಾಣಿಕರಾದ ರಾಯಚೂರಿನ ಸುನಿಲ್‌ ಚಿನ್ನಪ್ಪ, ಯಲಬುರ್ಗಾದ ಮಲ್ಲಯ್ಯ ಹಿರೇಮಠ, ಬಾಗಲಕೋಟೆಯ ಬಸಯ್ಯ ದೇಸಾಯಿಮಠ, ಗಂಗಾವತಿಯ ಲಕ್ಷ್ಮಿ, ರಾಯಚೂರಿನ ರಾಮಕೃಷ್ಣ ಕೂರ, ಕೊಪ್ಪಳದ ಚಂದ್ರಪ್ಪ ರಾಜೂರು, ಶಿವಾನಂದ ದೊಡ್ಮನಿ, ಉಡುಪಿಯ ಕಿರಣ ಕೋಲೂರು ಹಾಗೂ ರಾಜೇಶ್ವರಿ ಮಂಜುನಾಥ ಗಾಯಗೊಂಡವರು.

ಗಾಯಾಳುಗಳು ನರಳುತ್ತ ರಸ್ತೆ ಪಕ್ಕದಲ್ಲಿಯೇ ರಾತ್ರಿ ಕಳೆದಿದ್ದು ನಂತರ ಪೊಲೀಸರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು.

ಬಸ್‌ ಉಡುಪಿಯಿಂದ ಗಂಗಾವತಿಗೆ ಹೊರಟಿತ್ತು. ಬಸ್‌ ಚಾಲಕ ಶಿವಮೊಗ್ಗದ ಪ್ರದೀಪ ಜಿ. ನಿದ್ದೆಯ ಮಂಪರಿನಲ್ಲಿದ್ದುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಲಾರಿ ಪಾರ್ಕಿಂಗ್‌ ಲೈಟ್‌ ಹಾಕಿರದಿದ್ದರಿಂದ ಅಪಘಾತ ನಡೆದಿದೆ ಎಂದು ಬಸ್‌ ಚಾಲಕ ತಿಳಿಸಿದ್ದಾನೆ. ಲಾರಿ ಹಾಗೂ ಬಸ್‌ ಚಾಲಕರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT