ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಚರಂಡಿಗೆ ಇಳಿದ ಬಸ್; ಪ್ರಯಾಣಿಕರು ಪಾರು

Published 12 ನವೆಂಬರ್ 2023, 12:57 IST
Last Updated 12 ನವೆಂಬರ್ 2023, 12:57 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ದೇವಬಾಗದಲ್ಲಿ ಸಾರಿಗೆ ಸಂಸ್ಥೆಯ ಬಸ್‍ವೊಂದು ಇಕ್ಕಟ್ಟಾದ ರಸ್ತೆಯಲ್ಲಿ ತಿರುವು ಪಡೆಯಲಾಗದೆ ಚರಂಡಿಗೆ ಇಳಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ನಗರದಿಂದ ದೇವಬಾಗಕ್ಕೆ ತೆರಳಿದ್ದ ಬಸ್ ಅಲ್ಲಿಂದ ವಾಪಸ್ಸಾಗುವ ವೇಳೆ ದೇವಬಾಗ ಬಸ್ ತಂಗುದಾಣದ ಬಳಿ ಈ ಘಟನೆ ನಡೆದಿದೆ. ‌

ಎರಡು ರಸ್ತೆಗಳು ಕೂಡುವ ಪ್ರದೇಶದಲ್ಲಿ ಇಕ್ಕಟ್ಟಾದ ರಸ್ತೆ ಇದ್ದು ಅಲ್ಲಿ ಬಸ್ ತಿರುಗಿಸುತ್ತಿದ್ದ ವೇಳೆ ಚಾಲಕನಿಗೆ ನಿಯಂತ್ರಣ ಸಿಗದೆ ಬಸ್‍ನ ಹಿಂಬದಿಯ ಚಕ್ರಗಳು ಪಕ್ಕದ ಚರಂಡಿಗೆ ಇಳಿದಿದ್ದವು. ಇದರಿಂದ ಬಸ್ ಒಂದು ಕಡೆ ವಾಲಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಬಸ್‍ನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಇದ್ದರು. ಯಾರಿಗೂ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದೂ ಹೇಳಿದರು.

‘ದೇವಬಾಗದಿಂದ ಮಾಜಾಳಿ ವರೆಗೆ ಇಕ್ಕಟ್ಟಾದ ಕಾಂಕ್ರೀಟ್ ರಸ್ತೆ ಇದೆ. ಕೆಲವೆಡೆ ಅಪಾಯಕಾರಿ ಸ್ಥಳವೂ ಇದೆ. ಅಂತಹ ಜಾಗ ಗುರುತಿಸಿ ರಸ್ತೆ ವಿಸ್ತರಣೆ ಮಾಡಿದರೆ ಅಪಾಯ ತಪ್ಪಿಸಬಹುದು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣ ಮೇಥಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT