ಕಾರವಾರ: ಸಾಂಪ್ರದಾಯಿಕ ಚರ್ಮವಾದ್ಯ ಗುಮಟೆಪಾಂಗ್ ವಾದನದ ಸದ್ದು, ಅದರ ಜತೆಗೇ ಸಿನಿಮಾ ಹಾಡಿಗೆ ನೃತ್ಯ.. ಬಳಿಕ ಯಕ್ಷಗಾನ, ಅದರ ಬೆನ್ನಲ್ಲೇ ಭರತನಾಟ್ಯ, ಗೊಂಬೆಯಾಟ, ವೀರಗಾಸೆ, ಕೂಚಿಪುಡಿ ನೃತ್ಯ...

ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾ ರಂಗಮಂದಿರದಲ್ಲಿಆಯೋಜಿಸಲಾಗಿರುವ ಸಾಂಸ್ಕೃತಿಕಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಈ ರೀತಿಯ ಹಲವು ಆಕರ್ಷಣೆಗಳು ಮನಸೂರೆಗೊಂಡವು.ವೇದಿಕೆಯಲ್ಲಿ ಕಲಾವಿದರು, ನೃತ್ಯಗಾರರು ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಿದ್ದರೆ ಸಭಿಕರು ಚಪ್ಪಾಳೆ ತಟ್ಟಿ, ಸೀಟಿ ಹೊಡೆದು ಹುರಿದುಂಬಿಸಿದರು.

ಇದಕ್ಕೂ ಮೊದಲು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕರಾವಳಿ ಉತ್ಸವವು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ. ಜನರಿಗೂ ಪ್ರತಿಭಾವಂತರನ್ನು ಗುರುತಿಸಲು ಅವಕಾಶವಾಗಿದೆ. ಶೇ 70ರಷ್ಟು ಯುವಕರೇ ಇರುವ ಈ ದೇಶದ ಪರಂಪರೆಯನ್ನು ಮುಂದುವರಿಸಲು ಮತ್ತು ದೇಶವನ್ನು ಮುಂಚೂಣಿಗೆ ತರುವ ಬಗ್ಗೆ ಚಿಂತಿಸಲು ಇದು ಸಕಾಲ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ತೂಗುಸೇತುವೆಗಳ ಸರದಾರ’ ಗಿರೀಶ್ ಭಾರದ್ವಾಜ್ ಮಾತನಾಡಿದರು. ತಹಶೀಲ್ದಾರ್ ಶ್ರೀದೇವಿ ಭಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಜಿ.ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಉಪನಿರ್ದೇಶಕ ಹಿಮಂತರಾಜು, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಅಧಿಕಾರಿ ಗುಡ್ಡಪ್ಪ ಇದ್ದರು.

ಸೇಂಟ್ ಮೈಕಲ್ಸ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಶಾಂತ್ ರೇವಣಕರ್ ಕಾರ್ಯಕ್ರಮ ನಿರೂಪಿಸಿದರು.

ಧ್ವನಿವರ್ಧಕದ ಕಿರಿಕಿರಿ:ನಿಗದಿತ ಸಮಯದಲ್ಲೇ ಕಾರ್ಯಕ್ರಮ ನೀಡುವಂತೆ ಉದ್ಘೋಷಕರು ಪದೇಪದೇ ಮನವಿ ಮಾಡುತ್ತಿದ್ದರು. ಆದರೆ, ವೇದಿಕೆಯಲ್ಲಿ ಧ್ವನಿವರ್ಧಕಗಳ ಸೂಕ್ತ ನಿರ್ವಹಣೆಯಾಗದೇ ಕಲಾವಿದರು ಕಿರಿಕಿರಿ ಅನುಭವಿಸಿದರು.

‘ಕೆಲವು ಮೈಕ್‌ಗಳು ಸ್ವಿಚ್ ಆನ್ ಆಗಿಲ್ಲ, ಶಬ್ದ ಕೇಳಿಸುತ್ತಿಲ್ಲ ಎಂದು ಧ್ವನಿವರ್ಧಕ ನಿರ್ವಹಣೆ ಮಾಡುವವರಿಗೆ ವೇದಿಕೆಯಿಂದಲೇ ಸೂಚನೆ ನೀಡಿದೆವು.ಆದರೂ ಸರಿಯಾಗಲಿಲ್ಲ.ಇದರಿಂದಲೂ ಸಮಯ ವ್ಯರ್ಥವಾಯಿತು’ ಎಂದು ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.