ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣಾಧೀನ ಕೈದಿ ಸಾವು: ಇನ್‌ಸ್ಪೆಕ್ಟರ್‌ ಸೇರಿ ಐವರು ಪೊಲೀಸರ ಅಮಾನತು

Published 25 ಜೂನ್ 2023, 18:43 IST
Last Updated 25 ಜೂನ್ 2023, 18:43 IST
ಅಕ್ಷರ ಗಾತ್ರ

ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಪೊಲೀಸ್ ಠಾಣೆಯಲ್ಲಿ ಶನಿವಾರ ವಿಚಾರಣಾಧೀನ ಕೈದಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್ ಸೇರಿ ಐವರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿದೆ.

ಇನ್‌ಸ್ಪೆಕ್ಟರ್ ಮಂಜುನಾಥ, ಅಪರಾಧ ವಿಭಾಗದ ಎಸ್ಐ ಮಂಜೇಶ್ವರ ಚಂದಾವರ, ಕಾನ್‌ಸ್ಟೆಬಲ್‌ಗಳಾದ ಮಹಾವೀರ, ರಮೇಶ ಹಾಗೂ ಸಂತೋಷ ಅಮಾನತುಗೊಂಡವರು.

‘ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಿ ನೀಡಲಾದ ವರದಿ ಆಧರಿಸಿ ಐಜಿ ಚಂದ್ರಗುಪ್ತ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

‘ಬಂಗಾರದ ಆಭರಣ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ತನ್ನನ್ನು ವಂಚಿಸಿದ್ದಾರೆ’ ಎಂದು ತುಳಸೀನಗರದ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ಬಿಹಾರ ಮೂಲದ ದಿಲೀಪ ಮಂಡಲ್ (37) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈತ ಠಾಣೆಯಲ್ಲೇ ತನ್ನ ಬ್ಯಾಗ್‌ನಲ್ಲಿದ್ದ ವಿಷಯುಕ್ತ ದ್ರಾವಣ ಸೇವಿಸಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT