ಮುಂಡಗೋಡ: ಟಿಬೆಟನ್ ಧಾರ್ಮಿಕ ನಾಯಕ ದಲೈಲಾಮಾ ಡಿ. 12ರಂದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕಿಗೆ ಆಗಮಿಸಲಿದ್ದಾರೆ.

ಸುಮಾರು 45 ದಿನಗಳ ಕಾಲ ಟಿಬೆಟನ್ ಕ್ಯಾಂಪ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವಿಶ್ರಾಂತಿ ಪಡೆಯಲು ಇಲ್ಲಿಗೆ ಆಗಮಿಸಲಿದ್ದು, ಸಾರ್ವಜನಿಕ ಕಾರ್ಯಕ್ರಮಗಳ ಸಂಖ್ಯೆ ಕಡಿಮೆಯಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.

ಟಿಬೆಟನ್ ಕ್ಯಾಂಪ್ನಲ್ಲಿ ಗುರುವಾರ ಪೊಲೀಸ್ ಬಂದೋಬಸ್ತ್ ಪರಿಶೀಲಿಸಿ, ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ ರಸ್ತೆ ಮೂಲಕ ತಾಲ್ಲೂಕಿಗೆ ಆಗಮಿಸಲಿದ್ದಾರೆ. 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ದಲೈಲಾಮಾ ಅವರನ್ನು ಭೇಟಿಯಾಗಬಯಸುವವರು, ಸಂಘಟಕರಿಂದ ಮುಂಚಿತವಾಗಿಯೇ ಅನುಮತಿ ಪಡೆದಿರಬೇಕು. ಅನುಮತಿ ಇಲ್ಲದೇ ಯಾರನ್ನೂ ಒಳಗೆ ಬಿಡುವುದಿಲ್ಲ. ಬೆಳಿಗ್ಗೆ 8ರಿಂದ 10ರವರೆಗೆ ಮಾತ್ರ ಸಂದರ್ಶಕರಿಗೆ ಸಮಯ ನಿಗದಿ ಮಾಡಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳ ಕುರಿತು ಸದ್ಯದವರೆಗೆ ಯಾವುದೇ ಮಾಹಿತಿಯಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಕಾರ್ಯಕ್ರಮಗಳಿದ್ದರೆ ಅವುಗಳ ಕುರಿತು ತಿಳಿಸಲಾಗುವುದು’ ಎಂದರು.

ಸದ್ಯ ಮೂರು ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ವಾಹನಗಳ ತಪಾಸಣೆ ಮಾಡಲಾಗುವುದು. ನಿಗದಿತ ಪಾಸ್ ಇದ್ದವರಿಗೆ ಮಾತ್ರ ಒಳಗೆ ಬಿಡಲಾಗುವುದು ಎಂದು ಅವರು ಹೇಳಿದರು.

ದಲೈಲಾಮಾ ಆಗಮನದ ನಿಮಿತ್ತ ಟಿಬೆಟನ್ ಕ್ಯಾಂಪ್ನ ಬೌದ್ಧ ಮಂದಿರಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ದಾರಿಯುದ್ದಕ್ಕೂ ಸ್ವಾಗತ ಕಮಾನುಗಳು, ಬಣ್ಣ ಬಣ್ಣದ ಧ್ವಜಗಳು, ಟಿಬೆಟ್ ಧ್ವಜಗಳು ರಾರಾಜಿಸುತ್ತಿವೆ. ಆರು ವರ್ಷಗಳ ನಂತರ ತಾಲ್ಲೂಕಿಗೆ ಆಗಮಿಸುತ್ತಿರುವ ದಲೈಲಾಮಾ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು ಬಿಕ್ಕುಗಳು ಬಿಡುವಿಲ್ಲದಂತೆ ಕೆಲಸದಲ್ಲಿ ನಿರತರಾಗಿದ್ದರು. ಬೌದ್ಧ ಮಂದಿರಗಳು ಸೇರಿದಂತೆ ಟಿಬೆಟನ್ ಕಾಲೊನಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.