ದಾಂಡೇಲಿ: ನಗರದ ಆದಿ ಜಾಂಬುವಂತ ಸಂಘ ಮತ್ತು ಮಹಾ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೈನ್ಯ ವತಿಯಿಂದ ನಗರ ಸಭೆಯ ಆವರಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ 208ನೇ ಭೀಮಾ ಕೋರೆಗಾವ್ ವಿಜಯೋತ್ಸವವನ್ನು ಗುರುವಾರ ಆಚರಿಸಲಾಯಿತು.

ನಗರಸಭೆ ಪೌರಾಯುಕ್ತ ವಿವೇಕ ಬೆನ್ನೆ ಮಾತನಾಡಿ, 1818ರ ಜನವರಿ 1ರಂದು ಮಾರ್ ಸೈನಿಕರು ಬ್ರಿಟಿಷರೊಂದಿಗೆ ಯುದ್ಧ ಮಾಡಿದ ಗೆದ್ದ ದಿನವನ್ನೇ ಭೀಮಾ ಕೋರೆ ಗಾಂವ್ ವಿಜಯೋತ್ಸವ ಎಂದು ಆಚರಿಸಲಾಗುತ್ತದೆ ಎಂದರು.

ಆದಿ ಜಾಂಬುವಂತ ಸಂಘ ಹಾಗೂ ಮಹಾ ನಾಯಕ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಚಂದ್ರಕಾಂತ ನಡಗೇರ ಮಾತನಾಡಿ, ಇತಿಹಾಸದಲ್ಲಿ ಮುಚ್ಚಿಟ್ಟಿರುವುದನ್ನು ಅಂಬೇಡ್ಕರ್ ಬ್ರಿಟನಲ್ಲಿ ಅಧ್ಯಯನ ಮಾಡುವಾಗ ಗ್ರಂಥಾಲಯದಲ್ಲಿ ಈ ಯುದ್ಧ ಕುರಿತು ಮಾಹಿತಿ ಸಿಕ್ಕಿದೆ. ಈ ಯುದ್ಧದ ಕುರಿತು ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ ಎಂದರು.

ಸಂಘದ ಪ್ರಮುಖರಾದ ಶ್ರೀನಿತ್ಯ ಕಾಂಬ್ಳೆ, ಆಯಿಶಾ ಮೋಕಾಶಿ, ರೇಣುಕಾ ಭಜಂತ್ರಿ, ಲಕ್ಷ್ಮಿ ಹರಿಜನ, ದತ್ತು ಮಾಳಗೆ , ಸದಾಶಿವ ಕಾಂಬಳೆ, ಸುರೇಶ ಕೇದಾರಿ, ಸತೀಶ ಚೌಹಾನ, ಬಸವರಾಜ ಹರಿಜನ, ಹನುಮಂತ ಹರಿಜನ, ದ್ಯಾಮಣ್ಣ ಹರಿಜನ, ಸುರೇಶ್, ಶಿವಾಜಿ ಕಾಂಬಳೆ, ಅನಿಲ್ ಕಾಂಬ್ಳೆ ಇದ್ದರು.