ಶಿರಸಿ: ಕೊರೊನಾ ವೈರಸ್ ನಿವಾರಣೆಗೆ ಎಲ್ಲರೂ ಧನ್ವಂತರಿ ಸಹಸ್ರನಾಮ ಪಠಿಸಬೇಕು ಎಂದು ತಾಲ್ಲೂಕಿನ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂದೇಶದಲ್ಲಿ ತಿಳಿಸಿದ್ದಾರೆ.

ವೈರಸ್ ಪೀಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಕ್ಕೆ ಔಷಧ ಕಂಡುಹಿಡಿಯಲಾಗದ ಕಾರಣ ದೇವರ ಮೊರೆ ಹೋಗಬೇಕಾಗಿದೆ. ಜೂನ್ 30ರೊಳಗೆ ಪ್ರತಿ ವ್ಯಕ್ತಿ ಕನಿಷ್ಠ 100 ಸಲವಾದರೂ ಇದರ ಪಠಣ ಮಾಡಬೇಕು. ಕೇವಲ ತನ್ನ ಆರೋಗ್ಯಕ್ಕೆ ಮಾತ್ರವಲ್ಲ, ಎಲ್ಲರ ಆರೋಗ್ಯಕ್ಕಾಗಿ ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿ, ದಿನವೊಂದಕ್ಕೆ ಎರಡು ಸಲ, ಪ್ರಯತ್ನ ಪಟ್ಟರೆ ಮೂರು ಸಲ ಪಠಿಸಬಹುದು. ಹೆಚ್ಚು ಜನ ಪಠಿಸಿದಾಗ ಉತ್ತಮವಾದ ಶಕ್ತಿ ನಿರ್ಮಾಣವಾಗುತ್ತದೆ. ಅದರಿಂದ ಸಮಾಜವನ್ನು ರೋಗಮುಕ್ತ ಮಾಡಲು ಸಾಧ್ಯವಾಗಬಹುದು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಸ್ರನಾಮ ಸ್ತೋತ್ರದ ಧ್ವನಿಮುದ್ರಣ ಮತ್ತು ಪಠ್ಯವನ್ನು ಒದಗಿಸಲಾಗಿದೆ. ಸ್ತೋತ್ರ ಪಠಣವನ್ನು ಶುಚಿಯಾಗಿ ಒಂದೇ ಸ್ಥಳದಲ್ಲಿ ಕುಳಿತು ಮಾಡಬೇಕು. ಸ್ತೋತ್ರವನ್ನು ಮೊಬೈಲ್‌ನಲ್ಲಿ ಪಡೆಯಲು ಹಾಗೂ ಹೆಚ್ಚಿನ ವಿವರಗಳಿಗೆ 8105733655 ಅಥವಾ 9483998443 ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಮಾಡಿರುವ ಸಹಸ್ರನಾಮದ ಪಾರಾಯಣ ಸಂಖ್ಯೆಯನ್ನು ಪ್ರತಿನಿತ್ಯ 8105733655 ಈ ಸಂಖ್ಯೆಗೆ ಕಳುಹಿಸಬೇಕು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.