ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಅಲ್ಹಾನ ನಾಮಸ್ಮರಣೆ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಮುಹಮ್ಮದ್ ಪೈಗಂಬರ ಅವರು ನಡೆದು ಬಂದ ದಾರಿ ಹಾಗೂ ಜನರಿಗೆ ನೀಡಿರುವ ಸಂದೇಶಗಳನ್ನು ಸಾರುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿದರು. ಮೂರು ತಾಸಿಗೂ ಅಧಿಕ ಕಾಲ ಮೆರವಣಿಗೆ ನಡೆಯಿತು. ಈದ್ ಮಿಲಾದ್ ಅಂಗವಾಗಿ ಮಸೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಪ್ರಮುಖ ಓಣಿಗಳಲ್ಲಿ ಹಸಿರು ಝೆಂಡಾಗಳು ರಾರಾಜಿಸಿದವು.