ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾದಲ್ಲಿ ಅನಿಲ ಟ್ಯಾಂಕರ್ ಪಲ್ಟಿ: ತಪ್ಪಿದ ಅಪಾಯ

Last Updated 25 ಜನವರಿ 2022, 6:05 IST
ಅಕ್ಷರ ಗಾತ್ರ

ಕುಮಟಾ: ಪಟ್ಟಣದ ಹೊನಮಾಂವ ದೇವಸ್ಥಾನದ ಬಳಿ ಜನವಸತಿ ಪ್ರದೇಶದಲ್ಲಿ ಮಂಗಳವಾರ, ಅನಿಲ ತುಂಬಿದ ಟ್ಯಾಂಕರ್, ಅದನ್ನು ಸಾಗಿಸುತ್ತಿದ‌್ದ ಲಾರಿಯಿಂದ ಕಳಚಿ ಬಿದ್ದಿದೆ.

ಮಂಗಳೂರಿನಿಂದ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿತು. ಆಗ ಟ್ಯಾಂಕರ್‌ನ ಸುರಕ್ಷಿತ ವಾಲ್ವ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ಅದನ್ನು ತಕ್ಷಣ ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪಟ್ಟಣದ ಗಿಬ್ ವೃತ್ತದ ಸಿದ್ದಾಪುರ - ಚಂದಾವರ ಮಾರ್ಗ ಮೂಲಕ ಹೊನ್ನಾವರದ ಎಲ್.ಐ.ಸಿ ಕಚೇರಿ ಬಳಿ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು.

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೆರವು‌ ನೀಡಿದರು ಎಂದು ಪಿ.ಎಸ್.ಐ ನವೀನ್ ನಾಯ್ಕ ಮಾಹಿತಿ‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT