ಕಾರವಾರ:ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಹೇಳಿದ ಕೂಡಲೇ ಜಿಲ್ಲೆಯ ಜನರಿಗೆ ಸೀಬರ್ಡ್ ನೌಕಾನೆಲೆ ಮತ್ತು ಕೊಂಕಣ ರೈಲ್ವೆ ನೆನಪಾಗುತ್ತವೆ. ಜಿಲ್ಲೆಯ ಹೆಸರನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಗೆ ಬರುವಂತೆ ಮಾಡಿದ ಈ ಎರಡು ಯೋಜನೆಗಳು ಸಾಕಾರಗೊಳ್ಳುವಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಶ್ರಮವಿದೆ.

1990ರಲ್ಲಿ ಕೊಂಕಣ ರೈಲು ಮಾರ್ಗದ ಕಾಮಗಾರಿ ಆರಂಭವಾಯಿತು. 1998ರಲ್ಲಿ ಪೂರ್ಣಪ್ರಮಾಣದಲ್ಲಿ ರೈಲುಗಳ ಓಡಾಟ ಆರಂಭವಾಯಿತು. ಅದಕ್ಕೂ ಮೊದಲು ಜಿಲ್ಲೆಯೂ ಸೇರಿ ಕರಾವಳಿ ಜನರು ಮುಂಬೈಗೆ ತೆರಳಲು ಗೋವಾದ ಪೋಂಡಾಕ್ಕೆ ಹೋಗಿ, ಅಲ್ಲಿಂದ ಕ್ಯಾಸಲ್ ರಾಕ್‌ಗೆ ಹೋಗಬೇಕಿತ್ತು. ಈ ಭಾಗದ ಜನರ ರೈಲು ಪ್ರಯಾಣದ ಕನಸು ನನಸಾಗಲು ವೇಗ ನೀಡಿದವರು ಅಂದಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್.

ರೈಲ್ವೆ ಬಳಕೆದಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಗದೀಶ್ ಬಿರ್ಕೋಡಿಕರ್ ಅವರು ಜಾರ್ಜ್ ಫರ್ನಾಂಡಿಸ್ ಅವರನ್ನು ‘ಕೊಂಕಣ ರೈಲಿನ ಹರಿಕಾರ’ ಎಂದು ಕೊಂಡಾಡುತ್ತಾರೆ. ‘ಕರಾವಳಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಮೊದಲೇ ಸಮೀಕ್ಷೆ ಆಗಿತ್ತು. ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರ ಬೆಂಬಲದೊಂದಿಗೆ ಜಾರ್ಜ್ ಫರ್ನಾಂಡಿಸ್ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಿದರು. ಅವರು ಸಚಿವರಾಗುವ ಮೊದಲು ಆಮೆಗತಿಯಲ್ಲಿದ್ದ ಕಾಮಗಾರಿಗೆಚುರುಕು ಮುಟ್ಟಿಸಿದರು’ ಎಂದು ನೆನಪಿಸಿಕೊಂಡರು.

‘ಯೋಜನೆಗೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡುವಲ್ಲಿ ಅವರ ಕಾರ್ಯ ಶ್ಲಾಘನೀಯ. ಕೊಂಕಣ ರೈಲ್ವೆಯ ಪ್ರಾದೇಶಿಕ ಕಚೇರಿಯನ್ನು ಮುರ್ಡೇಶ್ವರದಲ್ಲಿ ತೆರೆಯಲು ಚಿಂತಿಸಲಾಗಿತ್ತು. ಅದರ ಬದಲಾಗಿ ಕಾರವಾರದಲ್ಲೇ ಆರಂಭಿಸುವಂತೆ ಜಾರ್ಜ್ ಫರ್ನಾಂಡಿಸ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ರಕ್ಷಣಾ ಸಚಿವರಾಗಿದ್ದ ಅವರು ಸೀಬರ್ಡ್ ಯೋಜನೆಯ ಕಾಮಗಾರಿ ಪರಿಶೀಲನೆಗೆ ನಗರಕ್ಕೆ ಬಂದಿದ್ದರು. ಆ ಮನವಿಯನ್ನು ಪುರಸ್ಕರಿಸಿದ್ದ ಅವರು ಕಾರವಾರದಲ್ಲೇ ಕಚೇರಿ ಆರಂಭಿಸಲು ಸಹಕರಿಸಿದರು’ ಎಂದು ಸ್ಮರಿಸಿದರು.

‘ಸೀಬರ್ಡ್’ ಯೋಜನೆಗೂ ವೇಗ:1990ರ ಅವಧಿಯಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗಕಾರವಾರದಲ್ಲಿ ಸೀಬರ್ಡ್ ನೌಕಾನೆಲೆಯ ಕಾಮಗಾರಿ ಆರಂಭವಾಯಿತು. ಆದರೆ, ಅವರ ಹತ್ಯೆ, ಭೂಸ್ವಾಧೀನದ ವಿರುದ್ಧ ಸಂತ್ರಸ್ತರಿಂದ ತೀವ್ರ ಪ್ರತಿರೋಧಗಳ ಕಾರಣ ಕೆಲಸಕುಂಟತೊಡಗಿತ್ತು.

1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ, ಅದೇ ಅವಧಿಯಲ್ಲಿಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿದರು. ಕಾಮಗಾರಿಯ ಶೀಘ್ರ ಮುಕ್ತಾಯ ಮತ್ತು ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಜಾರ್ಜ್,ಕಾಮಗಾರಿಯನ್ನು ಆದ್ಯತೆ ಮೇರೆಗೆ ವೇಗವರ್ಧನೆ ಮಾಡಿಸಿದರು. ಖುದ್ದುಕಾರವಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರುಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

* ಇವನ್ನೂ ಓದಿ...

*ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

*ಮಂಗಳೂರಿನ ನಂಟು ಕಡಿದುಕೊಂಡಿದ್ದ ಜಾರ್ಜ್ ಕುಟುಂಬ

*ಹೀಗಿದ್ದರು ಜಾರ್ಜ್ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ

*ನ್ಯೂಯಾರ್ಕ್ನಿಂದ ಪುತ್ರ ಬಂದ ಬಳಿಕ ಜಾರ್ಜ್ ಫರ್ನಾಂಡಿಸ್ ಅಂತ್ಯಕ್ರಿಯೆ

*ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್?

*ಉದ್ಯೋಗವಿಲ್ಲದೆ ‘ಕರ್ಮಭೂಮಿ’ ಬಾಂಬೆಯ ಫುಟ್ಪಾತ್ಗಳಲ್ಲಿ ಮಲಗಿದ್ದರು ಫರ್ನಾಂಡಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.