ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ: ತಾಂತ್ರಿಕ ಪರಂಪರೆ ಪುನರಾರಂಭ

Published 27 ಆಗಸ್ಟ್ 2024, 15:30 IST
Last Updated 27 ಆಗಸ್ಟ್ 2024, 15:30 IST
ಅಕ್ಷರ ಗಾತ್ರ

ಗೋಕರ್ಣ: 10 ವರ್ಷಗಳ ಬಳಿಕ ಮಹಾಬಲೇಶ್ವರ ದೇವಾಲಯದ ವಂಶ ಪಾರಂಪರ್ಯ ಅರ್ಚಕ ವೇದಮೂರ್ತಿ ಅನಂತರಾಜ ಅಡಿ ಅವರು ಮಂಗಳವಾರ ಪುನಃ ಪೂಜೆ, ಬಲಿ ಪ್ರಕ್ರಿಯೆ ನಡೆಸುವುದರೊಂದಿಗೆತಾಂತ್ರಿಕ ಪರಂಪರೆ ಪುನರಾರಂಭಗೊಂಡಿತು.

2014ರ ಏಪ್ರಿಲ್‌ನಲ್ಲಿ ಕಾರಣಾಂತರದಿಂದ ಆಗಿನ ಆಡಳಿತ ಮಂಡಳಿ ಮಹಾಬಲೇಶ್ವರ ದೇವಾಲಯದಲ್ಲಿ ಮೂಲ ಅರ್ಚಕರಾದ ಹಿರೇ ಮತ್ತು ಅಡಿ ಮನೆತನದವರಿಗೆ, ದೇವಸ್ಥಾನದಲ್ಲಿ ಪೂಜೆ, ಬಲಿ ಮುಂತಾದ ತಾಂತ್ರಿಕತೆ ನಡೆಸಲು ಅವಕಾಶ ನಿರಾಕರಿಸಿತ್ತು. ಅರ್ಚಕ ಅಡಿ ದೇವರ ಪೂಜೆಗೆಂದು ಹೋದಾಗ ಅವರನ್ನು ತಡೆದು, ತಿರುಗಿ ಕಳುಹಿಸಲಾಗಿತ್ತು.

ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಒಪ್ಪಿಗೆ ಮೇರೆಗೆ ಅರ್ಚಕ ಅನಂತರಾಜ ಅಡಿ ಈಗ ಪುನಃ ಪೂಜೆ, ಬಲಿ ಪ್ರಾರಂಭಿಸಿದರು. ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ, ಅರ್ಚಕರಾದ ಗಣಪತಿ ಹಿರೇ, ಚಂದ್ರಶೇಖರ ಅಡಿ ಮೂಳೆ, ಶ್ರೀನಿವಾಸ ಅಡಿ, ಭಾರ್ಗವ ಹಿರೇ ಇದ್ದರು.

ಸಂಜೆ ಅನಂತರಾಜ ಅಡಿ ನೇತೃತ್ವದಲ್ಲಿ, ಪರಂಪರೆಯಂತೆ ಮಹಾಬಲೇಶ್ವರ ದೇವರ ಉತ್ಸವ ದಾರಿಯುದ್ದಕ್ಕೂ ಮೊಸರು ಕುಡಿಕೆ ಒಡೆಯುತ್ತ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ದೇವಾಲಯಕ್ಕೆ ಹೋಗಿ ಮರಳಿತು.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಮೂಲ ಅರ್ಚಕ ವೇದಮೂರ್ತಿ ಅನಂತರಾಜ ಅಡಿ ಮಂಗಳವಾರ ದೇವರಿಗೆ ಪೂಜೆ ಸಲ್ಲಿಸಿದರು
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಮೂಲ ಅರ್ಚಕ ವೇದಮೂರ್ತಿ ಅನಂತರಾಜ ಅಡಿ ಮಂಗಳವಾರ ದೇವರಿಗೆ ಪೂಜೆ ಸಲ್ಲಿಸಿದರು
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಮೂಲ ಅರ್ಚಕ ವೇ ಅನಂತರಾಜ ಅಡಿ ಬಲಿ ನೆರವೇರಿಸುತ್ತಿರುವುದು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಮೂಲ ಅರ್ಚಕ ವೇ ಅನಂತರಾಜ ಅಡಿ ಬಲಿ ನೆರವೇರಿಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT