ಯಲ್ಲಾಪುರ: ಯಲ್ಲಾಪುರ ಡಿಪೋದಿಂದ ಅಂಕೋಲಾ ತಾಲ್ಲೂಕು ಹೆಗ್ಗಾರ ಗ್ರಾಮಕ್ಕೆ ಬಸ್ ಸಂಚಾರವನ್ನು ಈಚೆಗೆ ಪುನಃ ಆರಂಭಿಸಲಾಗಿದೆ.

ಹೆಗ್ಗಾರ ಮಾಗ೯ವಾಗಿ ಹೋಗುತ್ತಿದ್ದ ಕಮ್ಮಾಣಿ ಬಸ್ ಗುಳ್ಳಾಪುರ ಸೇತುವೆ ಕುಸಿತದಿಂದಾಗಿ ಬಂದಾಗಿತ್ತು. ಅಂದಿನಿಂದಲೂ ಹೆಗ್ಗಾರಿಗೆ ಬಸ್ ಸಂಪಕ೯ ಇಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ರಾಮನಗುಳಿ ಸೇತುವೆ ನಿಮಾ೯ಣದ ನಂತರ ತಿಂಗಳ ಹಿಂದೆ ಕಮ್ಮಾಣಿ ಬಸ್ ಪುನರಾರಂಭವಾಯಿತಾದರೂ ಆ ಬಸ್ ಹೆಗ್ಗಾರ ಮಾಗ೯ವಾಗಿ ಹೋಗುವಂತಿರಲಿಲ್ಲ.

ಕಮ್ಮಾಣಿ ಬಸ್ ಅನ್ನು ಹೆಗ್ಗಾರ ಗ್ರಾಮಕ್ಕೂ ಬಿಡಬೇಕು ಎಂಬ ಸಾರ್ವಜನಿಕರ ಆಗ್ರಹದ ಮೇರೆಗೆ ಈ ಬಸ್ ಅನ್ನು ಈಗ ಹೆಗ್ಗಾರಿಗೂ ಬಿಡಲಾಗುತ್ತಿದೆ. ಇದರಿಂದ ಹೆಗ್ಗಾರ ಸುತ್ತಮುತ್ತಲ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಗ್ರಾಮಕ್ಕೆ ಆಗಮಿಸಿದ ಬಸ್ ಅನ್ನು ಪೂಜೆ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು. ಪ್ರಮುಖರಾದ ಮಹಾಬಲೇಶ್ವರ ಭಟ್ಟ, ರಾಮಕೃಷ್ಣ ಗಾಂವ್ಕರ, ರಾಜೇಶ ಹೆಗಡೆ ಕೈಗಡಿ, ಸುಬ್ರಾಯ ಕಲಗಾರೆ, ವಿ.ವಿ.ಜೋಷಿ, ಎನ್.ಎನ್.ಹೆಬ್ಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.