ಕಾರವಾರ: ಇಲ್ಲಿನ ಖಾಸಗಿ ನರ್ಸಿಂಗ್ ಹೋಮ್ನ ಸಿಬ್ಬಂದಿ ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆ ಪೊಲೀಸರು ಇಬ್ಬರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.

'ಕಾರವಾರದವರಾದ ಹರಿಶ್ಚಂದ್ರ ನಾಯ್ಕ, ಸುಭಾಶ ನಾಯ್ಕ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ರಾಜೀವ ಅವರಿಗೆ ವ್ಯಕ್ತಿಯೊಬ್ಬರು ತರಾಟೆಗೆ ಪಡೆದಿದ್ದ ದೃಶ್ಯವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧ ವಿಭಾಗ ನಿರ್ವಹಣೆ ಮಾಡುತ್ತಿದ್ದ ರಾಜೀವ ಪಿಕಳೆ ಅವಧಿ ಮೀರಿದ ಔಷಧ ನೀಡಿದ್ದ ದೃಶ್ಯ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಇದರಿಂದ ಮನನೊಂದು ಅವರು ಅಂಕೋಲಾ ತಾಲ್ಲೂಕಿನ ಅವರ್ಸಾದ ಮಠಾಕೇರಿಯಲ್ಲಿನ ಮನೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶುಕ್ರವಾರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

'ರಾಜೀವ್ ಅವರನ್ನು ತರಾಟೆಗೆ ಪಡೆದು, ದೃಶ್ಯ ಚಿತ್ರೀಕರಿಸಿಕೊಂಡ ವ್ಯಕ್ತಿ 75 ವರ್ಷದ ನಿವೃತ್ತ ಸೈನಿಕ. ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ಇನ್ನೂ ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
.ಪಿಕಳೆ ನರ್ಸಿಂಗ್ ಹೋಮ್ನ ಔಷಧ ವಿಭಾಗ ನಿಭಾಯಿಸುತ್ತಿದ್ದ ರಾಜೀವ ಪಿಕಳೆ ಆತ್ಮಹತ್ಯೆ