ಶಿರಸಿ: ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಜಾಗವಿದ್ದರೂ ಸರ್ಕಾರದಿಂದ ಹೊಸ ಕಟ್ಟಡ ಮಂಜೂರಾತಿ ಸಿಗದ ಕಾರಣಕ್ಕೆ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಅನಿವಾರ್ಯವಾಗಿ ಸೌಲಭ್ಯ ವಂಚಿತ ಬಾಡಿಗೆ ವಸತಿ ನಿಲಯದಲ್ಲಿ ವಾಸಿಸುವಂತಾಗಿದೆ.

ಇಲಾಖೆ ವ್ಯಾಪ್ತಿಯಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 10 ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಬನವಾಸಿ, ದಾಸನಕೊಪ್ಪ, ಚಿಪಗಿ, ಗಾಂಧಿನಗರದಲ್ಲಿ ಒಟ್ಟು 5 ವಸತಿ ನಿಲಯಗಳಿದ್ದು, ಸ್ವಂತ ಕಟ್ಟಡದಲ್ಲಿದೆ. ಸಾಲ್ಕಣಿ ಮತ್ತು ಬಂಡಲದಲ್ಲಿನ ಎರಡು ವಸತಿ ನಿಲಯಗಳು ದಾನಿಗಳ ನೆರವಿನಿಂದ ಉಚಿತ ಕಟ್ಟಡದಲ್ಲಿ ನಡೆಯುತ್ತಿವೆ. ಶಿರಸಿಯಲ್ಲಿ ಎರಡು ಮತ್ತು ಬನವಾಸಿಯಲ್ಲಿ ಒಂದು ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

‘ಖಾಸಗಿ ಕಟ್ಟಡದಲ್ಲಿರುವ ವಸತಿ ನಿಲಯಗಳಿಗೆ ಮಾಸಿಕ ₹3 ಲಕ್ಷದಷ್ಟು ಬಾಡಿಗೆ ಪಾವತಿಸಲಾಗುತ್ತಿದೆ. ಆದರೂ, ನಿರೀಕ್ಷಿತ ಸೌಲಭ್ಯಗಳನ್ನು ಹೊಂದಿಸುವುದು ಅಲ್ಲಿ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

‘ಬನವಾಸಿಯಲ್ಲಿ ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಕಾರ್ಯ ನಿರ್ವಹಿಸುತ್ತಿದ್ದು, 100 ವಿದ್ಯಾರ್ಥಿಗಳು ವಸತಿ ಇದ್ದಾರೆ. ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿದ್ಯುತ್ ಅವ್ಯವಸ್ಥೆಯಿದೆ. ಈ ವಸತಿ ನಿಲಯದಲ್ಲಿ ಮಂಚಗಳ ಕೊರತೆಯಿದೆ’ ಎಂಬುದು ವಿದ್ಯಾರ್ಥಿಗಳ ದೂರು.

‘ಶಿರಸಿಯಲ್ಲಿರುವ ಬಾಡಿಗೆ ಕಟ್ಟಡದ ವಸತಿ ನಿಲಯಗಳು ಚಿಕ್ಕದಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಇಕ್ಕಟ್ಟಿನ ಸ್ಥಿತಿಯಲ್ಲಿ ಇರುವಂತಾಗಿದೆ. ಬಿಸಿ ನೀರಿನ ಸೌಲಭ್ಯ, ವಿದ್ಯುತ್, ಗ್ರಂಥಾಲಯ ವ್ಯವಸ್ಥೆ, ಶೌಚಾಲಯ, ಮಲಗುವ ಹಾಸಿಗೆ ಮತ್ತು ವಸ್ತ್ರಗಳ ಅಗತ್ಯವಿದೆ’ ಎಂಬುದು ಇಲ್ಲಿರುವ ವಿದ್ಯಾರ್ಥಿಗಳ ಅಳಲು.

‘ಖಾಸಗಿ ಕಟ್ಟಡದಲ್ಲಿರುವ ವಸತಿ ನಿಲಯಕ್ಕೆ ಸೂಕ್ತ ಕಾಂಪೌಂಡ್, ಸಿಸಿಟಿವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಇಲ್ಲ. ದೂರದ ಊರುಗಳಿಂದ ಮಕ್ಕಳನ್ನು ವಸತಿ ನಿಲಯಗಳಲ್ಲಿ ಬಿಡುವ ಪಾಲಕರಿಗೆ ಸದಾ ಆತಂಕ ಕಾಡುತ್ತಿರುತ್ತದೆ’ ಎನ್ನುತ್ತಾರೆ ಪಾಲಕ ಪರಶುರಾಮ ಮಡಿವಾಳ.

ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯಗಳ ನಿರ್ವಹಣೆಗೆ ತೊಡಕಾಗುತ್ತದೆ. ಸ್ವಂತ ಕಟ್ಟಡ ಹೆಚ್ಚುವರಿ ಕಟ್ಟಡ ಮಂಜೂರಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಪ್ರಸಾದ ಆಲದಕಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ

ನಿರಂತರ ನಿಗಾ

‘ಬಾಡಿಗೆ ಕಟ್ಟಡದಲ್ಲಿನ ವಸತಿ ನಿಲಯದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ನಿರಂತರ ನಿಗಾ ಇಡಲಾಗುತ್ತಿದೆ. ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಲಾಗುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಅತ್ಯಗತ್ಯ ಸೌಲಭ್ಯ ಕಲ್ಪಿಸಲು ಇಲಾಖೆಯ ಮಾನದಂಡಗಳು ಅಡ್ಡಬರುವ ಕಾರಣ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.