ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಕಾಳಿ ನದಿ: ಸೇತುವೆ ಅವಶೇಷ ತೆರವು ಆರಂಭ

Published : 9 ಸೆಪ್ಟೆಂಬರ್ 2024, 15:46 IST
Last Updated : 9 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ಕಾರವಾರ: ಇಲ್ಲಿನ ಕಾಳಿನದಿಯ ಹಳೆಯ ಸೇತುವೆ ಕುಸಿದು ಬಿದ್ದು ಒಂದು ತಿಂಗಳು ಬಳಿಕ ಅವಶೇಷಗಳ ತೆರವು ಕಾರ್ಯ ಸೋಮವಾರ ಆರಂಭಗೊಂಡಿತು. ಮುಂಬೈನಿಂದ ತರಿಸಲಾದ ಕಟ್ಟಡ ಒಡೆಯುವ ಯಂತ್ರದ ನೆರವಿನಿಂದ ಕೋಡಿಬಾಗದ ಕಡೆಯ ಸೇತುವೆಯ ಭಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯಿತು.

ನದಿಯಂಚಿನಲ್ಲಿ ಕುಸಿಯದೆ ನಿಂತಿರುವ ಸೇತುವೆಯ ಭಾಗ ಶಿಥಿಲವಾಗಿದ್ದು, ತಜ್ಞರ ಸಲಹೆ ಮೇರೆಗೆ ಅದನ್ನು ಮೊದಲು ತೆರವುಗೊಳಿಸಲಾಗುತ್ತದೆ. ಅವಶೇಷಗಳ ತೆರವಿಗೆ ಕ್ರೇನ್ ಸಹಿತ ಬಾರ್ಜ್ ಸೇರಿ ಅತ್ಯಾಧುನಿಕ ಯಂತ್ರೋಪಕರಣಗಳ ಅಗತ್ಯವಿದ್ದು, ಒಂದೆರಡು ದಿನಗಳಲ್ಲಿ ಅವು ಬರಲಿವೆ.

‘ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕನಿಷ್ಠ ಮೂರು ತಿಂಗಳು ಬೇಕು. ಅವಶೇಷಗಳನ್ನು ಬೇರೆಡೆ ಸುರಿಯಲು ಇನ್ನೂ ಜಾಗ ಅಂತಿಮವಾಗಿಲ್ಲ’ ಎಂದು ಐಆರ್‌ಬಿ ಕಂಪನಿಯ ಎಂಜಿನಿಯರ್ ತಿಳಿಸಿದರು.

ಆಗಸ್ಟ್ 7ರ ತಡರಾತ್ರಿ 41 ವರ್ಷದಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದಿತ್ತು. ಸೇತುವೆಯ ಅವಶೇಷ ತೆರವು ಆಗದಿರುವ ಬಗ್ಗೆ ಸೆಪ್ಟೆಂಬರ್ 1ರ ಸಂಚಿಕೆಯ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

Cut-off box - ಲಾರಿ ಪತ್ತೆ ಕಾರ್ಯಾಚರಣೆ ಶೀಘ್ರ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದಲ್ಲಿ ಕಾಣೆಯಾದ ಲಾರಿ ಮತ್ತು ಮೂವರ ಪತ್ತೆಗೆ ನದಿಯಲ್ಲಿನ ಮಣ್ಣಿನ ರಾಶಿ ತೆರವಿಗೆ ಎರಡು ದಿನಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ‘ಗಂಗಾವಳಿ ನದಿಯಲ್ಲಿ ಬಿದ್ದಿರುವ ಮಣ್ಣು ಕಲ್ಲಿನ ರಾಶಿ ತೆರವಿಗೆ ಮೌಂಟೆಡ್ ಕ್ರೇನ್ ಬಾರ್ಜ್ ಬೇಕು. ಅದನ್ನು ತರಿಸಲು ಗೋವಾದ ಕಂಪನಿಯ ಜೊತೆಗೆ ಸಂವಹನ ನಡೆದಿದೆ. ಬಾರ್ಜ್ ತರಲು ಸೂಕ್ತ ವಾತಾವರಣವೂ ಬೇಕು’ ಎಂದು ಬಂದರು ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT