ಮುಂಡಗೋಡ: ದಾರ್ಶನಿಕರು, ಸಮಾಜ ಸುಧಾರಕರು ಯಾವುದೇ ಒಂದು ಜಾತಿಗೆ ಸೀಮಿತಗೊಂಡವರಲ್ಲ. ಅವರೆಲ್ಲರೂ, ಮಾನವಕುಲಕ್ಕೆ, ಮಾನವೀಯತೆಗೆ ಶ್ರೇಷ್ಠತೆಯನ್ನು ತಂದುಕೊಟ್ಟಂತ ಆದರ್ಶ ಪುರುಷರಾಗಿದ್ದಾರೆ. ಕನಕದಾಸರ ಭಕ್ತಿಯ ಪ್ರತೀಕವನ್ನು ಇಂದಿಗೂ ಉಡುಪಿಯ ಶ್ರೀಕೃಷ್ಣಮಠದಲ್ಲಿ ಕಾಣಬಹುದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿನ ಹುಬ್ಬಳ್ಳಿ ರಸ್ತೆಯ ಕನಕ ಮಂದಿರದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಜಿಲ್ಲಾ ಮಟ್ಟದ ಕನಕದಾಸ ಜಯಂತ್ಯುತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಾರ್ಶನಿಕರನ್ನು ಯಾವುದೇ ಒಂದು ಪರಂಪರೆ, ಜಾತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಮಹಾನ್ ಪುರುಷರ, ದಾರ್ಶನಿಕರ ಜಯಂತಿ ಆಚರಣೆಯ ಉದ್ದೇಶ ಸಾರ್ಥಕವಾಗಬೇಕು. ಅವರು ಹಾಕಿಕೊಟ್ಟಿರುವ ಆದರ್ಶ, ಮೌಲ್ಯಗಳನ್ನು ಅರಿತು ಜೀವನ ಸಾಗಿಸುವಂತಾಗಬೇಕು. ತಾಲ್ಲೂಕಿನಲ್ಲಿ ಎಲ್ಲ ಜಾತಿ, ಜನಾಂಗದವರು ಸಮನ್ವಯತೆ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಮಾದರಿ ತಾಲ್ಲೂಕು ಇದಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಕುರುಬ ಸಮುದಾಯದ ಬೇಡಿಕೆಯಾದ ಕನಕ ಭವನ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ಆದರೆ, ಜಾಗದ ಕುರಿತು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕನಕ ಭವನ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ. ಮಾತನಾಡಿ, ಭಕ್ತಿ ಕ್ರಾಂತಿಯ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಮಹಾನ್ ಸಂತ ಕನಕದಾಸರು ಶ್ರಮಿಸಿದ್ದರು. ಭಕ್ತಿಯ ಮೂಲಕ ಭಗವಂತನನ್ನು ಒಲಿಸಿಕೊಂಡು, ಶ್ರೇಷ್ಠತೆಯನ್ನು ಸಾರಿದ್ದರು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆಯಿದ್ದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದರು.

ಉಪನ್ಯಾಸಕ ಗಂಗಾಧರ ನಾಯ್ಕ, ತಹಶೀಲ್ದಾರ್ ಶಂಕರ ಗೌಡಿ, ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಚಲವಾದಿ, ಯುವಮುಖಂಡ ಬಸವರಾಜ ತನಖೆದಾರ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜ್ಞಾನದೇವ ಗುಡಿಯಾಳ, ಶಿವಾನಂದ ಕುರುಬರ, ಶಿವಾನಂದ ದೊಡ್ಮನಿ, ಯಲ್ಲಪ್ಪ ಕುರುಬರ, ಮಂಜುನಾಥ ಕೋಣನಕೇರಿ, ಶ್ರೀಕಾಂತ ಪಾಟೀಲ, ನಾಗರಾಜ ಗುಬ್ಬಕ್ಕನವರ, ಎಸ್.ಎಸ್.ಪಾಟೀಲ, ಗುಡದಯ್ಯ ಕಳಸಗೇರಿ, ಸುರೇಶ ಕುರುಬರ, ಕೆ.ಕೆ.ಕುರುವಿನಕೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.