ಕಾರವಾರ: ಇಲ್ಲಿನ ಬಿಲ್ಟ್ ವೃತ್ತದ ಸಮೀಪ, ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿ ನಿಲುಗಡೆ ಮಾಡಿದ್ದ ಗೂಡ್ಸ್ ವಾಹನಕ್ಕೆ ಶನಿವಾರ ಬೆಂಕಿ ಹೊತ್ತಿ ಉರಿಯಿತು.

ನಗರವೂ ಸೇರಿದಂತೆ ವಿವಿಧೆಡೆಗೆ ಹಾಲು ಪೂರೈಕೆ ಮಾಡಲು ಬಳಕೆ ಆಗುತ್ತಿದ್ದ ವಾಹನವು ನಗರದ ತಾಮ್ಸೆವಾಡಾದ ಸಂತೋಷಿ ಚಿಪ್ಕರ್ ಎಂಬುವವರಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಹೆದ್ದಾರಿಯ ಪಕ್ಕ ಚಾಲಕ ವಾಹನ ನಿಲುಗಡೆ ಮಾಡಿ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ವಾಹನಕ್ಕೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದ್ದರಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕಕ್ಕೆ ಒಳಗಾದರು. ಹೊತ್ತಿ ಉರಿಯುತ್ತಿದ್ದ ವಾಹನದ ಬೆಂಕಿ ಆರಿಸಲು ಸ್ಥಳದಲ್ಲಿದ್ದ ಜನರು ಪ್ರಯತ್ನಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದರು.

‘ಬಿಸಿಲಿನ ಝಳಕ್ಕೆ ಸಿಲುಕಿ, ವಾಹನದಲ್ಲಿ ಉಂಟಾದ ಶಾರ್ಟ್ ಸರ್ಕಿಟ್ನಿಂದ ಅಗ್ನಿ ಅವಘಡ ಸಂಭವಿಸಿರಬಹುದು. ವಾಹನದ ಎಂಜಿನ್ ಸೇರಿದಂತೆ ಬಹುಭಾಗ ಸುಟ್ಟು ಕರಕಲಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.