ಮಳೆ ಮಾಪನ ಘಟಕಗಳು ದುರಸ್ತಿಯಾಗದ ಕಡೆ ಹೊಸ ಘಟಕ ನೀಡಲು ಗುತ್ತಿಗೆಯಾಗಿದೆ. ಆದರೂ ಈವರೆಗೆ ಅಳವಡಿಸುವ ಕೆಲಸ ನಡೆದಿಲ್ಲ
-ನಾರಾಯಣ ಹೆಗಡೆ, ದೇವನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ
ಮಳೆ ಮಾಪನ ಯಂತ್ರಗಳ ದುರಸ್ತಿ ಮಾಡದಿರುವುದರಿಂದ ಸರಿಯಾದ ವರದಿ ದೊರಕದೆ ರೈತರಿಗೆ ಸಿಗಬೇಕಾದ ವಿಮೆ ಮೊತ್ತ ದೊರಕುತ್ತಿಲ್ಲ
-ಶಾಂತಾರಾಮ ನಾಯಕ, ರೈತ ಮುಖಂಡ
ಪ್ರತಿ ವರ್ಷ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಪಡೆಯಲು ರೈತರು ಹೋರಾಟ ನಡೆಸಬೇಕಾಗುತ್ತಿದೆ. ಮಳೆ ಮಾಪನ ಯಂತ್ರಗಳ ಅಧ್ವಾನ ಇದಕ್ಕೆ ಕಾರಣಗಳಲ್ಲೊಂದು. ಆದರೂ ಸರ್ಕಾರ ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.
-ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ಬಿದ್ರಕಾನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ
ಗೋಕರ್ಣದ ಬಂಗ್ಲೆಗುಡ್ಡದಲ್ಲಿ ಅಳವಡಿಸಿದ ಮಳೆ ಮಾಪನ ಯಂತ್ರ.
ಹಳಿಯಾಳದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಅಳವಡಿಸಿದ ಮಳೆ ಮಾಪನ ಯಂತ್ರ.