ಕುಮಟಾ: ‘ಮನುಷ್ಯನ ಹಲವು ಸಂಸಾರಿಕ ಸಮಸ್ಯೆಗಳಿಗೆ ಪರಿಹಾರವಿರುವ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಬದುಕಿನ ಆಚೆಯ ಹಲವು ಆಯಾಮಗಳನ್ನು ಕವಿ ನೀಡಿರುವುದು ವಿಶೇಷ’ ಎಂದು ಬೆಂಗಳೂರಿನ ಪ್ರೇರಣಾ ಟ್ರಸ್ಟ್ ಮುಖ್ಯಸ್ಥ ವಸಂತ ಭಟ್ಟ ಹೇಳಿದರು.

ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕುಮಟಾ ತಾಲ್ಲೂಕು ಕಸಾಪ ಘಟಕ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ಡಿ.ವಿ.ಜಿ. 50ನೇ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ‘ಮಂಕುತಿಮ್ಮನ ಕಗ್ಗ-ವಾಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ವಿನಾಯಕ ಭಟ್ಟ, ‘ಡಿ.ವಿ.ಜಿ ಅವರ ‘ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು‘ ಎನ್ನುವ ಕವಿತೆ ಸಾಲೇ ಮನುಕುಲಕ್ಕೆ ಮಾನವೀಯತೆಯ ಕೈಗನ್ನಡಿಯಂತಿದೆ. ಕನ್ನಡ ಪತ್ರಿಕೋದ್ಯಮದಲ್ಲೂ ಅಸಾಧಾರಣ ಸಾಧನೆ ಮಾಡಿರುವ ಡಿ.ವಿ.ಜಿ ಕನ್ನಡ ಭಾಷೆ, ಸಾಹಿತ್ಯದ ರಸ ಋಷಿಯಾಗಿದ್ದಾರೆ’ ಎಂದರು.

ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ, ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದ ನಾಯ್ಕ, ಪದವಿ ಪೂರ್ವ ವಿಭಾಗ ಪ್ರಾಚಾರ್ಯೆ ವೀಣಾ ಕಾಮತ್, ಪಾಧ್ಯಾಪಕ ವಿ.ಆರ್. ಶಾನಭಾಗ ಇದ್ದರು. ಕೀರ್ತಿ ನಾಯ್ಕ ನಿರೂಪಿಸಿದರು. ಮಂಕುತಿಮ್ಮನ ಕಗ್ಗದ ಆಯ್ದ ಪದ್ಯಗಳನ್ನು ವಾಚಿಸಲಾಯಿತು.

ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲೂ ‘ಮಂಕುತಿಮ್ಮನ ಕಗ್ಗ-ವಾಚನ ಕಾರ್ಯಕ್ರಮ' ಆಯೋಜಿಸಲಾಗಿತ್ತು. ಪ್ರೇರಣಾ ಟ್ರಸ್ಟ್ ಮುಖ್ಯಸ್ಥ ವಸಂತ ಭಟ್ಟ ಶಿಕ್ಷಕ ಕಿರಣ ಪ್ರಭು, ಅಮಿತ್ ಭಟ್, ನಿವೃತ್ತ ಮುಖ್ಯ ಶಿಕ್ಷಕ ಎನ್.ಆರ್. ಗಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.