ಕುಮಟಾ:`ಹಿಂದೆ ಕುಮಟಾ ಪಟ್ಟಣದ ಮಹಾನಗರ ಯೋಜನೆಯ ವಿನ್ಯಾಸ ನಕ್ಷೆ ತಯಾರಿಸಲು ಟೆಂಡರ್ ಪಡೆದ ದೆಹಲಿ ಮೂಲದ ಸಿ.ಎಫ್.ಐ.ಎಸ್.ಡಿ.ಇ.ಆರ್ ಕಂಪನಿ ಕೆಲಸ ಮಾಡದಿದ್ದರೂ ಅದಕ್ಕೆ ₹ 5.48 ಲಕ್ಷ ಮೊತ್ತ ಪಾವತಿ ಮಾಡಿರುವುದು ಅಕ್ರಮವಾಗಿದೆ. ಅದರ ವಸೂಲಿ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಕೊಳ್ಳಬೇಕು' ಎಂದು ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಸಂತೋಷ ನಾಯ್ಕ ಒತ್ತಾಯಿಸಿದರು.

‘ಒಟ್ಟೂ ₹ 8.71 ಲಕ್ಷ ಮೊತ್ತದ ಟೆಂಡರ್ ಅನ್ನು ಮ್ಯಾನ್ಯುಅಲ್ ಮೂಲಕ ಕರೆದಿರುವುದೂ ತಪ್ಪು. ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಯನ್ನು ಇ ಟೆಂಡರ್ ಮೂಲಕವೇ ಕರೆಯಬೇಕು ಎನ್ನುವ ನಿಯಮ ಗಾಳಿಗೆ ತೂರಲಾಗಿದೆ’ ಎಂದರು.

ಉಪಾಧ್ಯಕ್ಷ ಮಹೇಶ ನಾಯ್ಕ ಮಾತನಾಡಿ, ‘ಮಹಾನಗರ ವಿನ್ಯಾಸ ಯೋಜನೆ ಸಿದ್ಧಪಡಿಸುವ ಕಾಮಗಾರಿಗೆ ಸ್ಥಳೀಯ ಜಿಲ್ಲಾ ಪತ್ರಿಕೆಯೊಂದರಲ್ಲಿ ಕರೆದ ಟೆಂಡರ್ನಲ್ಲಿ ದೆಹಲಿ ಮೂಲದ ಕಂಪನಿ ಹೇಗೆ ಭಾಗವಹಿಸುತ್ತದೆ? ಸ್ಥಳೀಯ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದರೆ ಅವುಗಳನ್ನು ಸಂಪರ್ಕಿಸಬಹುದಿತ್ತು. ಈ ಬಗ್ಗೆ ರಾಜ್ಯ ಹಾಗೂ ಅಕೌಂಟಂಟ್ ಜನರಲ್ ಕಚೇರಿಯಿಂದ ನಡೆದ ಲೆಕ್ಕ ಪರಿಶೋಧನೆಯಲ್ಲೂ ಆಕ್ಷೇಪಿಸದಿರುವುದು ಗಮನಾರ್ಹ’ ಎಂದರು.

ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಮಾತನಾಡಿ, ‘ಮಹಾನಗರ ಯೋಜನೆಯ ವಿನ್ಯಾಸ ನಕ್ಷೆ ತಯಾರಿಸುವ ಟೆಂಡರ್ ಪ್ರಕ್ರಿಯೆ ನಿರ್ವಹಿಸಿ ಸಂಬಂಧಿಸಿದ ಕಂಪನಿಗೆ ಹಣ ಸಂದಾಯ ಮಾಡುವ ಸಂದರ್ಭದಲ್ಲಿ ಕುಮಟಾ ಪುರಸಭೆಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿಗೆ ನೊಟೀಸ್ ನೀಡಲಾಗುವುದು’ ಎಂದರು.

‘ಹಗಲು ಹೊತ್ತಿನಲ್ಲಿ ಉರಿಯುವ ಪಟ್ಟಣದ ಕೆಲ ಭಾಗದ ಬೀದಿ ದೀಪಗಳು ರಾತ್ರಿ ಹೊತ್ತಿನಲ್ಲಿ ಉರಿಯದಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಬೀದಿ ದೀಪ ನಿರ್ವಹಣೆ ಮಾಡುವ ಗುತ್ತಿಗೆದಾರರು ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ಸದಸ್ಯ ಎಂ.ಟಿ. ನಾಯ್ಕ ಆಕ್ಷೇಪಿಸಿದರು. ಅದಕ್ಕೆ ಅಧ್ಯಕ್ಷೆ ಸುಮತಿ ಭಟ್ಟ, ‘ಬೀದಿ ದೀಪ ನಿರ್ವಹಣೆಯನ್ನು ಬೇರೆ ಗುತ್ತಿಗೆದಾರರಿಗೆ ನೀಡುವ ಬದಲು ಪುರಸಭೆ ಸಿಬ್ಬಂದಿಗೆ ನೀಡಿದರೆ ವಿದ್ಯುತ್ ವ್ಯರ್ಥವಾಗುವುದು ತಪ್ಪುತ್ತದೆ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಇನ್ನು ಮುಂದಾದರೂ ಪಟ್ಟಣದ ನಿಜವಾದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಕಳಕಳಿ ತೋರಿಸೋಣ. ಪ್ರತಿಯೊಬ್ಬರ ಸದಸ್ಯರೂ ತಮ್ಮ ಭಾಗದ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡುವಂಥ ಅರ್ಥಪೂರ್ಣ ಚರ್ಚೆಗೆ ಸಾಮಾನ್ಯ ಸಭೆ ಸಾಕ್ಷಿಯಾಗುವಂತೆ ನೋಡಿಕೊಳ್ಳೋಣ’ ಎಂದರು.

ಸ್ಥಾಯಿ ಸಮಿತಿ ಸದಸ್ಯ ಸೂರ್ಯಕಾಂತ ಗೌಡ ಹಾಗೂ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

ಅಧ್ಯಯನ ಪ್ರವಾಸಕ್ಕೆ ₹ 5 ಲಕ್ಷ ಮಂಜೂರು

‘ಸ್ಮಾರ್ಟ್ ಸಿಟಿ ಬಹುಮಾನ ಪಡೆದ ಹೈದರಾಬಾದ್ಗೆ ಪುರಸಭೆ ಸದಸ್ಯರು ಸಿಬ್ಬಂದಿ ಅಧ್ಯಯನ ಪ್ರವಾಸ ಕೈಗೊಳ್ಳುವ ಬಗ್ಗೆ ₹ 5 ಲಕ್ಷ ಮಂಜೂರಾಗಿದೆ. ಮುಂದೆ ಕುಮಟಾ ಪಟ್ಟಣದಲ್ಲೂ ಅಭಿವೃದ್ಧಿ ಕೈಗೊಳ್ಳಲು ಇದು ಸಹಾಯಕಾರಿಯಾಗುತ್ತದೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಕಿ ವೀಣಾ ಕಾರವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.