ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ದೀಪ’ ಪ್ರಶಸ್ತಿಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆ

Published 22 ಆಗಸ್ಟ್ 2023, 13:34 IST
Last Updated 22 ಆಗಸ್ಟ್ 2023, 13:34 IST
ಅಕ್ಷರ ಗಾತ್ರ

ಕಾರವಾರ: ಹೊನ್ನಾವರದ ಜಾನಪದ ವಿಶ್ವಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಕುವೆಂಪು ದೀಪ’ ಪ್ರಶಸ್ತಿಗೆ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಆಯ್ಕೆಮಾಡಲಾಗಿದೆ. 

ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ‘ಕಾರಂತ ದೀಪ’ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಡೀನ್ ಡಾ.ಸಿ.ನಾಗಭೂಷಣ, ‘ಕಲಾ ದೀಪ’ ಪ್ರಶಸ್ತಿಗೆ ಕಲಾವಿದ ಎಚ್.ಎನ್.ಸುರೇಶ್, ‘ದೇವಮ್ಮ ರಾಮನಾಯಕ ದೀಪ’ ಪ್ರಶಸ್ತಿಗೆ ಅಂಕೋಲಾದ ಕಮ್ಮಾರ ಚಂದ್ರಕಾಂತ ಆಚಾರಿ, ‘ವಿದ್ಯಾರ್ಥಿ ದೀಪ’ ಪ್ರಶಸ್ತಿಗೆ ಯೋಗ ಪಟು ಶ್ರೀನಿಧಿ ಗೌಡ ಅವರನ್ನು ಆಯ್ಕೆ ಮಾಡಿದೆ.‌

‘ಪ್ರಶಸ್ತಿಯು ತಲಾ ₹6 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಸೆ.5 ರಂದು ಬೆಂಗಳೂರಿನ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪ್ರತಿಷ್ಠಾನದ  ಸವಿತಾ ಉದಯ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT