ಕುಮಟಾ: ನಿಯಮ ಮೀರಿ ಆಸ್ತಿ ಸಂಪಾದಿಸಿದ ಆರೋಪ ಹೊತ್ತಿರುವ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯ್ಕ ಅವರ ಸಂಬಂಧಿಗೆ ಸೇರಿದ ಮನೆ, ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡವು ಮಂಗಳವಾರ ಪರಿಶೀಲನೆ ನಡೆಸಿದೆ.

ಪಟ್ಟಣದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಮಳಿಗೆ, ಉದ್ಯಮಿ ಶೈಲೇಶ್ ನಾಯ್ಕ ಅವರಿಗೆ ಸೇರಿದ ಮನೆಯಲ್ಲಿ ಹಲವು ತಾಸುಗಳವರೆಗೆ ಲೋಕಾಯುಕ್ತ ತಂಡ ಶೋಧ ಕಾರ್ಯ ನಡೆಸಿತು. ಕೆಲ ದಾಖಲೆ ಪತ್ರಗಳನ್ನು ಸ್ಥಳದಿಂದ ಒಯ್ದಿದೆ ಎಂದು ಮೂಲಗಳು ತಿಳಿಸಿವೆ.

‘ಅಕ್ರಮ ಆಸ್ತಿ ಸಂಪಾದನೆ ದೂರಿನಡಿ ಆರ್ಟಿಒ ಎಲ್.ಪಿ.ನಾಯ್ಕ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ. ಕುಮಟಾ, ಚಂದಾವರದಲ್ಲಿರುವ ಅವರು ಮತ್ತು ಅವರ ಕೆಲ ಸಂಬಂಧಿಗಳ ಮನೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿರುವ ಶಂಕೆಯ ಮೇಲೆ ತಪಸಣೆ ನಡೆಸಲಾಗಿದೆ. ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.