ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ

Published 22 ಏಪ್ರಿಲ್ 2024, 14:00 IST
Last Updated 22 ಏಪ್ರಿಲ್ 2024, 14:00 IST
ಅಕ್ಷರ ಗಾತ್ರ

ದಾಂಡೇಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜನತೆಗೆ ಚೊಂಬು ನೀಡಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಅಡ್ಡಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಕ್ಷೇತ್ರದ ಎಲ್ಲಾ ಕಡೆ ಸುತ್ತಾಡಿದ್ದೇನೆ. ಜನರು ಬಿಜೆಪಿ ಪರ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ನೀವು ಕೊಡುವ ಮತ ದೇಶದ ಭವಿಷ್ಯ ನಿರ್ಧಾರ ಮಾಡುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಕೋಗಿಲಬನ ವಾಣಿ ಸಮಾಜ ಭವನದಲ್ಲಿ ಸೋಮವಾರ ನಡೆದ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಈ ಚುನಾವಣೆಯನ್ನು ಗ್ಯಾರಂಟಿ ಚುನಾವಣೆ ಎಂದು ಬಿಂಬಿಸುತ್ತಿದೆ. ಅವರ 60 ವರ್ಷ ಸಾಧನೆ ಏನು? ಗ್ಯಾರಂಟಿ ಅನುಷ್ಠಾನದಲ್ಲಿ ರಾಜ್ಯ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದ್ದು, ಇಂತಹ ಬೇಜವಾಬ್ದಾರಿ ಸರ್ಕಾರ ಜನರಿಗೆ ಬೇಸರ ತರಿಸಿದೆ ಎಂದರು.

ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳನ್ನು ಹೊಂದಿರದ ಕಾಂಗ್ರೆಸ್ ದಿವಾಳಿ ಅಂಚಿಗೆ ತಂದಿದೆ. ಮೋದಿಯ ಗ್ರಾಮ ಭಾರತದ ಕನಸಿಗೆ ಜೀವ ತುಂಬಲು ಮತ್ತೆ ಬಿಜೆಪಿಗೆ ನಿಮ್ಮ ಬೆಂಬಲವಿದೆ. ಬಿಜೆಪಿ ಕರ್ನಾಟಕದಲ್ಲಿ ಬಹುಮತ ಪಡೆಯುವ ಅಚಲ ವಿಶ್ವಾಸವಿದೆ. ಜೆಡಿಎಸ್ ಮೈತ್ರಿ ಬೆಂಬಲವೂ ಪಕ್ಷದ ಶಕ್ತಿ ಹೆಚ್ಚಿಸಿದೆ. ಹೀಗಾಗಿ ಈ ದೇಶದ ಸುರಕ್ಷತೆ ಮೋದಿ ಪ್ರಧಾನಿಯಾಗಬೇಕು. ಸಿದ್ದರಾಮಯ್ಯ ಸರ್ಕಾರದ ಸಂಪೂರ್ಣ ವಿಫಲವಾಗಿದ್ದು, ಬರ ನಿರ್ವಹಣೆಯಲ್ಲಿ ಸೋತಿದೆ. ವಿಧಾನ ಸೌಧದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಾ ರಾಜ್ಯದಲ್ಲಿ ಅಶಾಂತಿ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ‘ನಾವು ಕುರಿಗಳಲ್ಲ, ಹುಲಿಗಳು’ ಎಂದು ತೋರಿಸಿದ್ದು ಮೋದಿ. ಚಂದ್ರಯಾನದಿಂದ ರೈತನ ಮನೆಯ ಅಂಗಳದವರೆಗೆ ಅಭಿವೃದ್ಧಿ ಸಾಧಿಸಿದ್ದೇವೆ. ರಾಜಕಾರಣಕ್ಕೆ ಹೊಸ ಮಾದರಿ ತಂದಿದ್ದು ಮೋದಿ ಸರ್ಕಾರ. ರಾಮ ಮಂದಿರ ನಿರ್ಮಾಣವು ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ನವರಿಗೆ ಹಗುರವಾಗಿ ಮಾತನಾಡುವುದು ಬಿಟ್ಟರೇ ಯಾವುದೇ ಗುರುತರ ಕೆಲಸ ಮಾಡಿ ಗೊತ್ತಿಲ್ಲ. ಬಿಜೆಪಿ ಬೆಂಬಲಿಸಿ ಮತ್ತೆ ಮೋದಿ ಭಾರತದ ಪ್ರಧಾನಿಯಾಗುವುದು ನಿಶ್ಚಿತ ಎಂದರು.

ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿ, ನೆಹರೂ ಆದಿಯಾಗಿ ರಾಹುಲ್ ಗಾಂಧಿ ಹಿಂದೂ ಸಂಸ್ಕೃತಿ ಹಾಳು ಮಾಡಿದ್ದಾರೆ. ಈಗ ಕಾಂಗ್ರೆಸ್ ನಲ್ಲಿ ಗಟ್ಟಿತನವೇ ಇಲ್ಲ. ಬರಿ ವಂಶ ರಾಜಕಾರಣಕ್ಕೆ ಹೋರಾಡಿದ್ದಾರೆ. ಹೊರತು ದೇಶದ ಅಭಿವೃದ್ಧಿ ಗೌಣವಾಗಿದೆ. ರಾಜ್ಯದಲ್ಲಿ ಜಿಹಾದ್ ಮನೋಭಾವ ಹೆಚ್ಚಾಗುತ್ತಿದೆ ಎಂದರು.

ಮಾಜಿ ಶಾಸಕರಾದ, ಸುನಿಲ ಹೆಗಡೆ, ವಾಮನ್ ಮಿರಾಶಿ, ಮಹಾಶಕ್ತಿ ಕೇಂದ್ರ ಪ್ರಶಾಂತ ಬಸತುಕರ, ಉಮೇಶ ಭಾವಗತ, ಸುಬ್ರಾಯ ವಾಡೇಕರ್, ಶಂಬು ಮುರಡಗೋಡ, ದಾಂಡೇಲಿ ಮಂಡಲ ಅಧ್ಯಕ್ಷ ಬುದ್ಧಿವಂತ ಗೌಡ ಪಾಟೀಲ, ಗುರು ಮಠಪತಿ, ಮಿಥುನ ನಾಯ್ಕ, ರೋಷನ್ ನೇತ್ರಾವಳಿ, ಗುರು ಮಠಪತಿ, ವಿಷ್ಣು ಮೂರ್ತಿ ರಾವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT